Wednesday, January 22, 2025

Hema Chaudhary: ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ನಟಿ ಹೇಮಾ ಚೌಧರಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳಿಂದ ಬ್ರೈನ್ ಹೆಮರೇಜ್‌ನಿಂದ  ಬಳಲುತ್ತಿದ್ದರು ಎನ್ನಲಾಗಿದೆ. ತೀವ್ರ ನಿಗಾ ಘಟಕದಲ್ಲಿ ನಟಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೇ ವಿದೇಶದಲ್ಲಿರುವ ಮಗನ ಆಗಮನಕ್ಕೆ ಕಾಯುತ್ತಿದ್ದಾರೆ.

ಮೊನ್ನೆಯಷ್ಟೇ ನಟಿ ಲೀಲಾವತಿ ಅವರ ಪುಣ್ಯತಿಥಿಯಲ್ಲಿ ನಟಿ ಆಗಮಿಸಿ, ವಿನೋದ್ ರಾಜ್ ಅವರಿಗೆ ಸಾಂತ್ವನ ಹೇಳಿದರು.

ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್‌, ಕಮಲ್ ಹಾಸನ್, ಚಿರಂಜೀವಿ, ಮೋಹನ್ ಬಾಬು, ಮಲಯಾಳಂ ಸೂಪರ್ ಸ್ಟಾರ್ ಪ್ರೇಮ್ ನಜೀರ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಹೀಗೆ ಅನೇಕ ನಟರ ಜತೆ ಹೇಮಾ ಚೌಧರಿ ತೆರೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದ ತಮ್ಮನನ್ನು ಹತ್ಯೆಗೈದ ಸಹೋದರ

ಜಯಪ್ರಧಾ, ಜಯಸುಧಾ, ಶ್ರೀದೇವಿ, ಜಯಮಾಲ, ಆರತಿ, ಮಂಜುಳಾ, ಪದ್ಮಪ್ರಿಯ, ಲಕ್ಷ್ಮೀ ಮೊದಲಾದವರ ಜತೆ ತೆರೆಹಂಚಿಕೊಂಡಿದ್ದಾರೆ. ಶುಭಾಶಯ ಗಾಳಿಮಾತು ಮತ್ತು ವೀರಪ್ಪನಾಯ್ಕ ಚಿತ್ರಗಳಲ್ಲಿಯ ಅಮೋಘ ಅಭಿನಯದಿಂದ ಜನಮನ್ನಣೆ ಗಳಿಸಿದ್ದರು.

 

 

 

RELATED ARTICLES

Related Articles

TRENDING ARTICLES