Wednesday, January 22, 2025

ಜಿನ್ನಾ ಸಂತತಿಯ ಜಮೀರ್ ತೆಲಂಗಾಣದಲ್ಲಿ ಏನು ಹೇಳ್ದಾ? : ಈಶ್ವರಪ್ಪ ಕಿಡಿ

ಗದಗ : ಜಿನ್ನಾ ಸಂತತಿಯ ಸಚಿವ ಜಮೀರ್ ಅಹ್ಮದ್ ತೆಲಂಗಾಣದಲ್ಲಿ ಏನು ಹೇದ್ದಾ? ನಾವು ಮುಸ್ಲಿಮರಿಗೆ ನಮಸ್ಕಾರ ಮಾಡ್ತೀವಾ? ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಮುಸ್ಲಿಂ ಶಾಸಕರನ್ನ ಸ್ಪೀಕರ್ ಸ್ಥಾನದಲ್ಲಿ ಕೂರಿಸಿದ್ದೇವೆ. ಎಲ್ಲಾ ಶಾಸಕರು ಅವರಿಗೆ ನಮಸ್ಕಾರ ಮಾಡಬೇಕು ಅಂತ. ನಾವು ಮುಸಲ್ಮಾನರನ್ನು ನಮಸ್ಕಾರ ಮಾಡಿಕೊಂಡು ಹೋಗುತ್ತೇವಾ? ಇಲ್ಲ.. ಆ ಸಭಾಪತಿ ಸ್ಥಾನಕ್ಕೆ ನಮಸ್ಕರಿಸುತ್ತೇವೆ ಎಂದು ಗರಂ ಆಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಹೇಳಿದ್ದನ್ನು ಸಮರ್ಥನೆ ಮಾಡ್ತಾರೆ. ಅವರು ಹೇಳಿರೋದು ಸರಿ ಅಂತ ಸಿದ್ದರಾಮಯ್ಯ ಹೇಳ್ತಾರೆ. ಈಗಲೂ ನಾನು ಹೇಳ್ತಿನಿ, ನಾಳೆ ಹಿಂದೂ ರಾಷ್ಟ್ರ ಆಗುತ್ತೇ ಅಂತ ನಾ ಹೇಳಲ್ಲ. ಇದು ಹಿಂದೂ ರಾಷ್ಟ್ರವೇ, ಇದು ಹಿಂದೂ ರಾಷ್ಟ್ರ ಆಗಿಯೇ ಆಗುತ್ತೆ ಎಂದು ಕಿಡಿಕಾರಿದ್ದಾರೆ.

ಸಿಎಂ ಬಿಜೆಪಿ ಸುಳ್ಳಿನ ಕಾರ್ಖಾನೆ ಅಂದ್ರು

ಸಿಎಂ ಸಿದ್ದರಾಮಯ್ಯ ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಸುಳ್ಳಿನ ಕಾರ್ಖಾನೆ ಅಂತ ಹೇಳ್ತಾರೆ, ಅದನ್ನು ಜನ ನಂಬಿದ್ರಾ? ಮೂರು ರಾಜ್ಯದಲ್ಲಿ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಆ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಈಗ ಏನು? ಎಂದು ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES