Monday, December 23, 2024

ವಿಶ್ವಗುರು ಮೋದಿ ಭಾರತದ ಮರ್ಯಾದೆ ಹರಾಜು ಹಾಕ್ತಿದ್ದಾರೆ : ಬಿ.ಕೆ. ಹರಿಪ್ರಸಾದ್

ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್ ವಾರ್ ನಿಲ್ಲಿಸುತ್ತೇವೆ ಅಂತ ವಿಶ್ವಗುರು ಹೇಳಿಕೊಳ್ತಾರೆ. ಅದೇ ವಿಶ್ವಗುರು ವಿಶ್ವದ ಮುಂದೆ ಭಾರತದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೋಡ್ ನಿಂದ ಹಿಡಿದು ರಫೆಲ್ ತನಕ ಪ್ರತಾಪ್ ಸಿಂಹ ಮಾತನಾಡೋದು ಅಷ್ಟೇ ಅಲ್ಲ. ಪ್ರತಾಪ್ ಸಿಂಹ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಅವರ ತನಿಖೆ ಆಗಲೇ ಬೇಕು ಎಂದು ಆಗ್ರಹಿಸಿದರು.

ವಿಪಕ್ಷ ನಾಯಕ ಆರ್. ಅಶೋಕ್ ಅವರು ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ಮಟ್ಟಕ್ಕೆ ಬೆಳೆದಿಲ್ಲ. ಬಿಜೆಪಿಯವರಿಗೆ ನಮ್ಮ ಲೋಪಗಳನ್ನು ಹೇಳಿಕೊಳ್ಳಲು ಆಗಲೇ ಇಲ್ಲ. ಬಿಜೆಪಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತೇ ಆಡಲಿಲ್ಲ. ಅದಕ್ಕೆ ಅವಕಾಶ ನೀಡಿದವರು ಸಭಾಧ್ಯಕ್ಷ ಖಾದರ್ ಹಾಗೂ ಸಭಾಪತಿ ಹೊರಟ್ಟಿ ಎಂದು ಹೇಳಿದರು.

ಮೊದಲು ಅವ್ರ ಪಕ್ಷ ಭದ್ರ ಮಾಡಿಕೊಳ್ಳಲಿ

ಬಿಜೆಪಿಗರು ಕಾಂಗ್ರೆಸ್​ಗೆ ಬರುವು ವಿಚಾರವಾಗಿ ಮಾತನಾಡಿ, ಬಿಜೆಪಿಯಿಂದ ಯಾರಾದರೂ ಈ ಕಡೆ ಬರ್ತಾರಾ ಅಂತ ನೋಡಬೇಕಿದೆ. ಅಶೋಕ್ ಅವರು ಮೊದಲು ಅವರ ಪಕ್ಷ ಭದ್ರ ಮಾಡಿಕೊಳ್ಳಲು ನೋಡಲಿ. ಆರ್. ಅಶೋಕ್ ಮನಸ್ಸು ಹುಲ್ಲಿನ ಮೆದೆಯಲ್ಲಿ ಸೂಜಿ ಹುಡುಕುತ್ತಿರುವ ಹಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES