Wednesday, January 22, 2025

ರಾಜ್ಯದಲ್ಲಿ ಇಂದು ಕೊರೋನಾಗೆ ಇಬ್ಬರು ಬಲಿ

ಬೆಂಗಳೂರು : ರಾಜ್ಯದಲ್ಲಿ ಇಂದು 22 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಮಹಾಮಾರಿಗೆ ಇಬ್ಬರು ಸಾವನ್ನಪ್ಪಿದ್ದಾರೆ.

ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ 2.49ರಷ್ಟಿದೆ. ಬೆಂಗಳೂರಿನಲ್ಲಿ ಇಂದು 359 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 19 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ನೆರೆ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಪರಿಣಾಮ ರಾಜ್ಯದಲ್ಲೂ ಮಹಾಮಾರಿ ಭೀತಿ ಉಂಟಾಗಿದೆ. ಜೆಎನ್‌.1 ಕೊರೋನಾ ವೈರಸ್ ಒಮಿಕ್ರಾನ್ ತಳಿಯ ಮೂಲ ತಳಿಯಾಗಿದ್ದು, ಕಳೆದ ಕೆಲವು ವಾರಗಳಲ್ಲಿ ವೇಗವಾಗಿ ಹರಡುವ ವೈರಸ್‌ಗಳಲ್ಲಿ ಒಂದಾಗಿದೆ.

ದೇಶದಲ್ಲಿ 21 ಜೆಎನ್‌.1 ಪ್ರಕರಣ ಪತ್ತೆ

ಕೋವಿಡ್-19ರ ರೂಪಾಂತರ ಉಪತಳಿ ಜೆಎನ್‌.1 ವೈರಸ್ ದೇಶದಲ್ಲಿ 21 ಪ್ರಕರಣಗಳು ಪತ್ತೆಯಾಗಿದೆ. ಗೋವಾ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಪ್ರಕರಣಗಳು ವರದಿಯಾಗಿವೆ. ಗೋವಾದಲ್ಲಿ ಈವರೆಗೆ 19 ಪ್ರಕರಣ ವರದಿಯಾಗಿದ್ದರೆ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

RELATED ARTICLES

Related Articles

TRENDING ARTICLES