Thursday, December 26, 2024

ಪ್ರೀತಿಸಿ ಯುವತಿ ಓಡಿ ಹೋಗಿದ್ದಕ್ಕೆ ಯುವಕನ ಸೋದರ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ

ಹಾವೇರಿ:ಪ್ರೀತಿಸಿ ಯುವಕನೊಂದಿಗೆ ಯುವತಿ ಓಡಿ ಹೋಗಿದ್ದಕ್ಕೆ ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಿದ ಘಟನೆ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದಲ್ಲಿ ನಡೆದಿದೆ.

ಮುದೇನೂರ ಗ್ರಾಮದ ಪ್ರಕಾಶನ ಜೊತೆಗೆ ಚಳಗೇರಿಯ ಯುವತಿ ಓಡಿ ಹೋಗಿದ್ದಳು. ಈ ವಿಚಾರಕ್ಕೆ ಸಿಟ್ಟಾದ ಯುವತಿಯ ಕಡೆಯುವರು ಪ್ರಕಾಶ್‌ ಸೋದರ ಮಾವ ಪ್ರಶಾಂತ್‌ ಮೇಲೆ ಹಲ್ಲೆ ಮಾಡಿದ್ದಾರೆ.

ಮುದೇನೂರನಿಂದ ಕಿಡ್ನಾಪ್ ಮಾಡಿ ರಾಣೆಬೆನ್ನೂರ ಗ್ರಾಮೀಣ ಠಾಣೆಯ ಎದುರು ಅರೆಬೆತ್ತಲೆ ಮಾಡಿ ಬಿಟ್ಟು ಹೋಗಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದವರು ಚಳಗೇರಿ ಗ್ರಾಮದ ಯುವತಿಯ ಸಂಬಂಧಿಕರು ಎಂದು ಪ್ರಶಾಂತ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: ಪರೀಕ್ಷೆ ಶುಲ್ಕ ಪಾವತಿಸದ್ದಕ್ಕೆ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ

ಮೂರು ದಿನಗಳ ಹಿಂದೆ ಪ್ರಕಾಶ್‌ ಜೊತೆ ಯುವತಿ ಓಡಿ ಹೋಗಿದ್ದಾಳೆ.ಇದರ ಹಿಂದೆ ಸೋದರ ಮಾವ ಪ್ರಶಾಂತ್‌ ಕೈವಾಡ ಇದೆ ಎಂದು ತಿಳಿದು ಈ ಕೃತ್ಯವನ್ನ ಎಸಗಿದ್ದಾರೆ ಎನ್ನಲಾಗಿದೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್‌, ಅವರಿಬ್ಬರು ಮನೆಬಿಟ್ಟು ಹೋಗಿದ್ದು ನನಗೆ ಗೊತ್ತಿಲ್ಲ. ತಪ್ಪಾಗಿ ತಿಳಿದು ಮೂರು ದಿನದಿಂದ ನನಗೆ ಕಿರುಕುಳ ನೀಡಿ ಈಗ ಏಕಾಏಕಿ 25 ಜನರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲ್ಲೆ ಸಂಬಂಧ ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES