ಬೆಂಗಳೂರು : ಬೆಂಗಳೂರು ಮೂಲದ ನ್ಯೂಜಿಲೆಂಡ್ ಸ್ಟಾರ್ ಆಲ್ರೌಂಡರ್ ರಚಿನ್ ರವಿಂದ್ರ ಅವರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ.
ದುಬೈನ ಕೋಕಾ ಕೋಲಾ ಅರೆನಾದಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಚೆನ್ನೈ ತಂಡ ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ವಿಶೇಷವೆಂದರೆ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಂಡಿದೆ.
50 ಲಕ್ಷ ರೂ. ಮೂಲ ಬೆಲೆಯೊಂದಿಗೆ ರಚಿನ್ ರವೀಂದ್ರ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ರಚಿನ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಡುವೆ ಪೈಪೋಟಿ ನಡೆಯಿತು. ಅಂತಿಮವಾಗಿ 1.80 ಕೋಟಿ ರೂ.ಗೆ ರಚಿನ್ ಅವರನ್ನು ತಮ್ಮ ತೆಕ್ಕೆಗೆ ಹಕಿಕೊಳ್ಳುವಲ್ಲಿ ಚೆನ್ನೈ (ಸಿಎಸ್ಕೆ) ಯಶಸ್ವಿಯಾಯಿತು.
14 ಕೊಟಿ ರೂ.ಗೆ ಮಿಚೆಲ್ ಸೇಲ್
ಮತ್ತೊಬ್ಬ ಕಿವೀಸ್ ಸ್ಟಾರ್ ಪ್ಲೇಯರ್ ಡ್ಯಾರಿಲ್ ಮಿಚೆಲ್ ಭರ್ಜರಿ ಬೆಲೆಗೆ ಮಾರಾಟವಾಗಿದ್ದಾರೆ. 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಿಚೆಲ್ ಹರಾಜಿನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಮಿಚೆಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 14 ಕೋಟಿ ರೂ.ಗೆ ಖರೀದಿಸಿತು.
Mitchell in Manjal! 🦁💛 pic.twitter.com/UmAISnQDa1
— Chennai Super Kings (@ChennaiIPL) December 19, 2023
ಚೈನ್ನೈ ತಂಡದಲ್ಲಿ ‘ಕಿವೀಸ್’ ಪ್ರಾಬಲ್ಯ
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈ ಬಾರಿ ಕಿವೀಸ್ ಆಟಗಾರರೇ ಪ್ರಾಬಲ್ಯ ಸಾಧಿಸಿದ್ದಾರೆ. ನ್ಯೂಜಿಲೆಂಡ್ನ ಸ್ಟೀಫನ್ ಫ್ಲೆಮಿಂಗ್ ಸಿಎಸ್ಕೆ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಇನ್ನೂ ಕಿವೀಸ್ ಕ್ಲಾಸ್ ಬ್ಯಾಟರ್ ಡೆವೊನ್ ಕಾನ್ವೆ ಅವರು ಕಳೆದ ಸೀಸನ್ಲ್ಲಿ ಚೆನ್ನೈ ಪರ ಆರಂಭಿಕರಾಗಿ ಅಬ್ಬರಿಸಿದ್ದರು. ಕಿವೀಸ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಕೂಡ ಧೋನಿ ಬಳಗದಲ್ಲಿದ್ದಾರೆ. ಇದೀಗ ಮತ್ತೊಬ್ಬ ಆಲ್ರೌಂಡರ್ ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್ ಕೂಡ ಚೆನ್ನೈ ಬಳಗ ಸೇರಿದ್ದಾರೆ.
First Time in #Yellove !🦁💛 pic.twitter.com/2JXLlvWrNO
— Chennai Super Kings (@ChennaiIPL) December 19, 2023