Thursday, May 2, 2024

ಐಪಿಎಲ್ ಇತಿಹಾಸದಲ್ಲೇ ದಾಖಲೆ : ಮಿಚೆಲ್ ಸ್ಟಾರ್ಕ್ 24.75 ಕೋಟಿಗೆ ಸೇಲ್

ಬೆಂಗಳೂರು : ಐಪಿಎಲ್​-2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್​ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

2 ಕೋಟಿ ಮೂಲ ಬೆಲೆಯೊಂದಿಗೆ ಮಿಚೆಲ್ ಸ್ಟಾರ್ಕ್​ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ಮಾರಕ ವೇಗಿ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್​, ಮುಂಬೈ ಇಂಡಿಯನ್ಸ್​, ಕೆಕೆಆರ್ ಹಾಗೂ ಗುಜರಾತ್ ನಡುವೆ ಭರ್ಜರಿ ಫೈಟ್ ನಡೆಯಿತು. ಇವರು ಅಂತಿಮವಾಗಿ ಬರೋಬ್ಬರಿ 24.75 ಕೋಟಿಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ಪಾಲಾಗಿದ್ದಾರೆ.

ಈ ಮೂಲಕ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಸದ್ಯ ಐಪಿಎಲ್​ ಹರಾಜಿನಲ್ಲಿ ಬಿಕರಿಯಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ನಂತರದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್​ 20.50 ಕೋಟಿ, ಸ್ಯಾಮ್ ಕರ್ರನ್ 18.50 ಕೋಟಿ, ಕ್ಯಾಮರೂನ್ ಗ್ರೀನ್ 17.50 ಕೋಟಿಗೆ ಬಿಕರಿಯಾಗಿದ್ದರು.

ಆಸಿಸ್ ಆಟಗಾರರ ಮೇಲೆ 50 ಕೋಟಿ

ವಿಶ್ವ ಚಾಂಪಿಯನ್ ಆಸಿಸ್​ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಸಾಕಷ್ಟು ಹಣದ ಮಳೆ ಸುರಿಸಿದೆ. ಕೇವಲ ಮೂವರು ಆಟಗಾರರಿಗೆ 50 ಕೋಟಿ ರೂ. ನೀಡಲಾಗಿದೆ.

ಮಿಚೆಲ್ ಸ್ಟಾರ್ಕ್- 24.75 ಕೋಟಿ (ಕೆಕೆಆರ್)

ಪ್ಯಾಟ್ ಕಮ್ಮಿನ್ಸ್- 20.50 ಕೋಟಿ (ಹೈದರಾಬಾದ್)

ಟ್ರಾವಿಸ್ ಹೆಡ್- 6.80 ಕೋಟಿ (ಹೈದರಾಬಾದ್)

RELATED ARTICLES

Related Articles

TRENDING ARTICLES