Friday, May 3, 2024

IPL-2024 ಹರಾಜಿಗೆ ಕ್ಷಣಗಣನೆ : ಲೈವ್ ಸ್ಟ್ರೀಮಿಂಗ್ ಎಲ್ಲಿ? ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಬೆಂಗಳೂರು : ಇಂದು ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಲ್ಲೂ ಇತಿಹಾಸದಲ್ಲಿ ಪ್ರಥಮ ಬಾರಿಗೆ ಭಾರತದ ಹೊರಗೆ ಹರಾಜು ನಡೆಯಲಿದೆ.

ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದ್ದು, ಒಟ್ಟು 333 ಕ್ರಿಕೆಟಿಗರು ಹರಾಜು ಪಟ್ಟಿಯಲ್ಲಿದ್ದಾರೆ. ಈ ಪೈಕಿ 214 ಭಾರತೀಯ ಹಾಗೂ 119 ವಿದೇಶಿ ಆಟಗಾರರಿದ್ದಾರೆ.

116 ಆಟಗಾರರಿಗೆ ಅಂತರಾಷ್ಟ್ರೀಯ ಪಂದ್ಯ ಆಡಿದ ಅನುಭವವಿದ್ದರೆ, 217 ಆಟಗಾರರು ಯಾವುದೇ ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ. 10 ತಂಡಗಳಿಗೆ ಒಟ್ಟಾರೆ ಬೇಕಿರುವುದು ಕೇವಲ 77 ಆಟಗಾರರು. ಇದರಲ್ಲಿ 30 ಸ್ಥಾನ ವಿದೇಶಿ ಆಟಗಾರರಿಗೆ ಮೀಸಲಾಗಿದೆ.

 

ಐಪಿಎಲ್ ಹರಾಜು

19 ಡಿಸೆಂಬರ್‌ 2024

ಹರಾಜು ಎಲ್ಲಿ?

ಕೋಕಾ-ಕೋಲಾ ಅರೆನಾ, ದುಬೈ

ಎಷ್ಟು ಗಂಟೆಗೆ ಆರಂಭ?

11:30 AMಕ್ಕೆ ಪ್ರಾರಂಭ (ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆ)

ಪ್ರಸಾರ (ಲೈವ್‌ ವೀಕ್ಷಣೆ)

JioCinema (ಲೈವ್ ಸ್ಟ್ರೀಮಿಂಗ್), ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ಪ್ರಾಂಚೈಸಿ ಬಳಿ ಉಳಿದಿರುವ ಹಣ

  • ಗುಜರಾತ್ ಟೈಟಾನ್ಸ್ : 38.15 ಕೋಟಿ
  • ಸನ್ ರೈಸರ್ಸ್ ಹೈದರಾಬಾದ್ : 34 ಕೋಟಿ
  • ಕೋಲ್ಕತ್ತಾ ನೈಟ್ ರೈಡರ್ಸ್ : 32.7 ಕೋಟಿ
  • ಚೆನ್ನೈ ಸೂಪರ್ ಕಿಂಗ್ಸ್ : 31.4 ಕೋಟಿ
  • ಪಂಜಾಬ್ ಕಿಂಗ್ಸ್ : 29.1 ಕೋಟಿ
  • ಡೆಲ್ಲಿ ಕ್ಯಾಪಿಟಲ್ಸ್ : 28.95 ಕೋಟಿ
  • ಆರ್‌ಸಿಬಿ : 23.25 ಕೋಟಿ
  • ಮುಂಬೈ ಇಂಡಿಯನ್ಸ್ : 17.75 ಕೋಟಿ
  • ರಾಜಸ್ಥಾನ್ ರಾಯಲ್ಸ್ : 14.5 ಕೋಟಿ
  • ಲಕ್ನೋ ಸೂಪರ್‌ಜೈಂಟ್ಸ್ : 13.15 ಕೋಟಿ

 

RELATED ARTICLES

Related Articles

TRENDING ARTICLES