Sunday, December 22, 2024

ಕೊರೋನಾ ಹಿನ್ನೆಲೆ ಚಾಮರಾಜನಗರ ಗಡಿಯಲ್ಲಿ ಕಟ್ಟೆಚ್ಚರ!

ಚಾಮರಾಜನಗರ: ರಾಜ್ಯದಲ್ಲಿ ಕೊವಿಡ್​ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇರಳದಲ್ಲಿ ಕೊವಿಡ್​ ಕೇಸ್​ಗಳು ಹೆಚ್ಚಳವಾದ ಹಿನ್ನೆಲೆ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚಾಮರಾಜನಗರ ಗಡಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಶೂನ್ಯ ಕೊವಿಡ್ ಕೇಸ್​​​​ಗಳಿವೆ.
ಯಾರೂ ಆತಂಕ ಪಡುವ ಅಗತ್ಯವಿಲ್ಲವೆಂದು ಚಾಮರಾಜನಗರ DHO ಡಾ.ಚಿದಂಬರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಾಲಾ ಮಕ್ಕಳ ಪ್ಯಾಂಟ್ ಬಿಚ್ಚಿಸಿ​ ದೈಹಿಕ ಶಿಕ್ಷಕನಿಂದ ವಿಚಿತ್ರ ಪಾಠ!

ಕೊರೋನಾ ಎದುರಿಸಲು ನಾವು ಸನ್ನದ್ಧವಾಗಿದ್ದು ಅಗತ್ಯ ಬೆಡ್, ಆಮ್ಲಜನಕ, ಸಿಬ್ಬಂದಿ ಸಮರ್ಪಕವಾಗಿವೆ.
ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಠಿಣ ಸಂದರ್ಭ ಎದುರಿಸಲು ಕೂಡ ಆರೋಗ್ಯ ಇಲಾಖೆ ಸನ್ನದ್ದವಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES