Sunday, December 22, 2024

ಕೋವಿಡ್​ ಹಿನ್ನೆಲೆ: ಸಾರ್ವಜನಿಕರಿಗೆ ಸೂಚನೆ ನೀಡಿದ ಆರೋಗ್ಯ ಇಲಾಖೆ!

ಬೆಂಗಳೂರು: ನೆರೆಯ ಕೇರಳದಲ್ಲಿ ಕೋವಿಡ್​ ಪ್ರಕರಣಗಳು ಏರುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮುನ್ನೆಚರಿಕಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ಕೆಲವೊಂದು ಸಲಹಾಸೂಚನೆಗಳನ್ನು ಬಿಡುಗಡೆಗೊಳಿಸಿದೆ.

ತಮಿಳುನಾಡು ಮತ್ತು ಕೇರಳದಲ್ಲಿ ಕೋವಿಡ್​ ನ ಉಪತಳಿ JN1, ವರದಿಯಾಗಿದೆ. ರಾಜ್ಯದ ಹವಾಮಾನ ಏರಿಳಿತ ಚಳಿಗಾಲ ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್​ಮಸ್​ ಹಬ್ಬ, ಹೊಸವರ್ಷ ಸಂಭ್ರಮಾಚರಣೆ ಬರಲಿದ್ದು ಕೋವಿಡ್​ ಎಚ್ಚಳವಾಗುವ ಸಾಧ್ಯತೆ ಇದೆ, ಈ ಹಿನ್ನೆಲೆ ರಾಜ್ಯದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹಾ ಪತ್ರ ಹೊರಡಿಸಿದೆ.

ಇದನ್ನೂ ಓದಿ: ರಾಜ್ಯದ ಜನತೆಗೆ ಬರ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ!: BY ವಿಜಯೇಂದ್ರ

ಆರೋಗ್ಯ ಇಲಾಖೆ ಮಾರ್ಗಸೂಚಿಗಳು:

  • 60 ವರ್ಷ ಮೇಲ್ಪಟ್ಟವರು ಮತ್ತು ಅನಾರೋಗ್ಯ ಪೀಡಿತರು, ಹಾಲುಣಿಸಿವ ತಾಯಂದಿರು ಜನದಟ್ಟಣೆಯಿಂದ ದೂರ ಉಳಿಯುವುದು.
  • ಜ್ವರ, ಶೀತ, ಕೆಮ್ಮು ಇರುವವರು ಅಗತ್ಯ ಚಿಕಿತ್ಸೆ ಪಡೆಯುವುದು.
  • ಬಾಯಿ ಮೂಗು ಮುಚ್ಚುವಂತೆ ಮಾಸ್ಕ್ ಧರಿಸುವುದು.
  • ಜನದಟ್ಟನೆ ಪ್ರದೇಶಕ್ಕೆ ತೆರಳದಿರುವುದು.
  • ಉತ್ತಮ‌ ವೈಯಕ್ತಿಕ ಸ್ವಚ್ಚತೆ ಕಾಪಾಡಲು ಸಲಹೆ.
  • ಆಗಾಗ ಕೈಗಳನ್ನ ಸಾಬೂನಿಂದ ತೊಳೆಯುವುದು.
  • ಆರೋಗ್ಯ ಸಮಸ್ಯೆ ಇದ್ದಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿರುವುದು , ಹಿರಿಯರಿಂದ ದೂರ ಉಳಿಯುವುದು.
  • ಅಂತರಾಷ್ಟ್ರಿಯ ಪ್ರಯಾಣದ ವೇಳೆ ಎಚ್ಚರಿಕೆ ವಹಿಸಿವುದು.
  • ವಿಮಾನದೊಳೆಗೆ ಮತ್ತು ನಿಲ್ದಾಣಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸುವುದು.

RELATED ARTICLES

Related Articles

TRENDING ARTICLES