Thursday, December 26, 2024

ಟಿಪ್ಪು ಹಿಂದೂ ಸ್ತ್ರೀಯರ ಮಾನಭಂಗ ಮಾಡಿದ್ದಾನೆ : ರವಿಕುಮಾರ್

ಬೆಂಗಳೂರು : ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರ ಕುರಿತು ಬಿಜೆಪಿ ಎಂಎಲ್​ಸಿ ಎನ್. ರವಿಕುಮಾರ್​​​​ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಸಾಕಷ್ಟು ಅನ್ಯಾಯ ಮಾಡಿದ ಟಿಪ್ಪುವಿನ ಹೆಸರಿಡಬಾರದು ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಈ ದೇಶದಲ್ಲಿದ್ದು, ಈ ದೇಶದವರಂತೆ ಬದುಕಲಿಲ್ಲ. ಆತ ಮತಾಂಧ. ಮತಾಂತರ ಮಾಡಿದ, ಸಾವಿರಾರು ಮಂದಿರಗಳನ್ನ ಕೊಳ್ಳೆ ಹೊಡೆದ. ಹಿಂದೂ ಸ್ತ್ರೀಯರ ಮಾನಭಂಗ ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ.

ಕೋಲಾರದ ವಸತಿ ಶಾಲೆಯಲ್ಲಿ ಮಲದ ಗುಂಡಿಗೆ ವಿದ್ಯಾರ್ಥಿಗಳನ್ನು ಇಳಿಸಿದ್ದಕ್ಕೆ ರವಿಕುಮಾರ್​​​​ ಆಕ್ರೋಶ ಹೊರಹಾಕಿದ್ದಾರೆ. ತ್ರೇತಾಯುಗದಲ್ಲಿ ನಾವಿಲ್ಲ. ಇಷ್ಟೊಂದು ಟೆಕ್ನಾಲಜಿ ಬಂದಿದೆ. ಶೌಚಗುಂಡಿ ಸ್ವಚ್ಚತೆಗೆ ಮಶಿನ್ ಬಳಸಬೇಕು ಎಂಬ ನಿಯಮವಿದೆ. ಆದರೆ, ವಿದ್ಯಾರ್ಥಿಗಳನ್ನು ಇಳಿಸಿದ್ದು ನಾಚಿಕೆಗೇಡಿನ ಪರಮಾವಧಿ ಎಂದು ಬೇಸರಿಸಿದ್ದಾರೆ.

ಇನ್ನು ಹಿಂದೂ ರಾಷ್ಟ್ರವಾಗೋದಕ್ಕೆ ನಾನು ಬಿಡೋದಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಯಾವುದೋ ಅಮಲಿನಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES