ನವದೆಹಲಿ : ಕುವೈತ್ ದೊರೆ ಎಮಿರ್ ಶೇಖ್ ನವಾಫ್ అలా ಅಹ್ಮದ್ అలా- ಸಬಾಹ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಶೇಖ್ ನವಾಫ್ ಅವರ ದುರದೃಷ್ಟಕರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ರಾಜಮನೆತನ
ಮತ್ತು ಕುವೈತ್ ಜನತೆಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಸೂರತ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಉದ್ಘಾಟನೆ ಇಂದು!
ಕೇಂದ್ರ ಸರ್ಕಾರ ಭಾನುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದೆ. ಈ ಸಮಯದಲ್ಲಿ ರಾಷ್ಟ್ರಧ್ವಜವು ಅರ್ಧಮಟ್ಟದಲ್ಲಿ ಹಾರಾಡುತ್ತದೆ. “ಅಮೀರ್ ಶೇಕ್ ಅವರಿಗೆ ಗೌರವ ಸೂಚಕವಾಗಿ, ಭಾರತ ಸರ್ಕಾರ ಡಿಸೆಂಬರ್ 17 ರಂದು ಒಂದು ದಿನ ಶೋಕಾಚರಣೆ ನಡೆಸಲು ನಿರ್ಧರಿಸಿದೆ. ರಾಷ್ಟ್ರಧ್ವಜವನ್ನು ನಿಯಮಿತವಾಗಿ ಹಾರಿಸುವ ಭಾರತದಾದ್ಯಂತ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವು ಅರ್ಧಮಟ್ಟದಲ್ಲಿ ಹಾರಾಡಬೇಕು. ಈ ಅವಧಿಯಲ್ಲಿ ಯಾವುದೇ ಮನರಂಜನಾ ಕಾರ್ಯಗಳು ಇರುವುದಿಲ್ಲ ಎಂದು ತಿಳಿಸಿದೆ.
ಕುವೈತ್ ನ ಎಮಿರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್ (86) ನಿಧನರಾಗಿದ್ದಾರೆ. ಕುವೈತ್ ನ ರಾಜ್ಯ ಟೆಲಿವಿಷನ್ ಶನಿವಾರ (ಡಿಸೆಂಬರ್ 16) ಈ ಮಾಹಿತಿಯನ್ನು ನೀಡಿದೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Deeply saddened to learn about the unfortunate demise of His Highness Sheikh Nawaf Al-Ahmed Al-Jaber Al-Sabah. We convey our deepest condolences to the Royal family, the leadership and the people of Kuwait.
— Narendra Modi (@narendramodi) December 16, 2023