Wednesday, December 18, 2024

ಯತ್ನಾಳ್ ಹುಚ್ಚು ನಾಯಿ ಇದ್ದಂತೆ : ರೇಣುಕಾಚಾರ್ಯ ಕಿಡಿ

ದಾವಣಗೆರೆ : ಶಾಸಕ ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ ಎಂದು ಸ್ವಪಕ್ಷದ ಶಾಸಕರ ವಿರುದ್ಧವೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯತ್ನಾಳ್ ಬಗ್ಗೆ ನಾನು ಮಾತನಾಡುವುದಕ್ಕೂ ಅಸಹ್ಯ ಅನಿಸುತ್ತದೆ ಎಂದು ಸರ್ವಜ್ಞರ ವಚನ ಹೇಳುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಆನೆ ಬೀದಿಗೆ ಇಳಿದಾಗ ಹುಚ್ಚು ನಾಯಿ ಬೊಗಳುತ್ತೆ. ಅದಕ್ಕೆ ಆನೆಗೆ ಇರುವ ಗೌರವ ಕಡಿಮೆಯಾಗುತ್ತಾ? ನಾಯಿಗೆ ಇರುವ ನಿಯತ್ತು ಆ ಮನುಷ್ಯ ನಿಗೆ ಇಲ್ಲ. ಜೆಡಿಎಸ್ ಪಕ್ಷಕ್ಕೆ ಹೋದವರನ್ನು ಕರೆತಂದಿದ್ದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ. ಆದರೆ, ಆ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಯಡಿಯೂರಪ್ಪ ಆನೆ ಇದ್ದಂತೆ

ವಿಜಯೇಂದ್ರ, ಯಡಿಯೂರಪ್ಪನವರಿಗೆ ಟೀಕೆ ಮಾಡಿದ್ರೆ ಪ್ರಧಾನಿ ಮೋದಿ, ಕೇಂದ್ರ ವರಿಷ್ಠರನ್ನು ಟೀಕೆ ಮಾಡಿದಂತೆ‌. ಯಡಿಯೂರಪ್ಪ ಆನೆ ಇದ್ದಂತೆ ಅವರ ಬಗ್ಗೆ ಮಾತನಾಡುವವರು ಹುಚ್ಚು ನಾಯಿ. ಹುಚ್ಚು ನಾಯಿ ಬಗ್ಗೆ ಮಾತನಾಡುವುದು ಕೂಡ ವೇಸ್ಟ್. ಆ ಹುಚ್ಚು ನಾಯಿ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೇನೆ. ಸೋಮಣ್ಣ ಸೋಲಿಗೆ ವಿಜಯೆಂದ್ರ ಕಾರಣ ಎಂದು ಹೇಳುತ್ತಾರೆ. ಸೋಮಣ್ಣ ಸೋಲಲು ವಿಜಯೇಂದ್ರ ಕಾರಣನಾ? ಪ್ರಶ್ನಿಸಿದ್ದಾರೆ.

ವಿಜಯೇಂದ್ರ ಬಗ್ಗೆ ಬೊಗಳೋಕೆ ಬಿಟ್ಟವರು ಯಾರು?

ಶಿಕಾರಿಪುರದಲ್ಲಿ ಅವರನ್ನು ಸೋಲಿಸಲು ಕುತಂತ್ರ ಮಾಡಿದವರು ಇಂತವರೇ. ಗೆದ್ದರೆ ಮಹಾನ್ ನಾಯಕನಾಗುತ್ತಾನೆ ಎಂದು ಸೋಲಿಸಲು ಕುತಂತ್ರ ಮಾಡಿದ್ರು. 2018ರಲ್ಲಿ ಸಚಿವ ಸ್ಥಾನ ಕೊಡಲಿಲ್ಲ ಎಂದು ಈ ರೀತಿ ಮಾಡ್ತಾ ಇದಾರೆ. ಯಾವ ಸಿನಿಯಾರಿಟಿ ಇದೆ? ಬೊಗಳೋದೇ ಸಿನಿಯಾರಿಟಿನಾ? ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಬೊಗಳೋಕೆ ಬಿಟ್ಟವರು ಯಾರು? ಯಾರು ಅವರ ವಿರುದ್ದ ಬೊಗಳು ಅಂತ ಹೇಳಿದ್ದಾರೆ. ಇವರಿಗೆ ಯಾರು ಈ ರೀತಿ ಬೊಗಳು ಅಂತ ಹೇಳಿಕೊಟ್ಟಿದ್ದಾರೆ ಅಂತ ಹೇಳಲಿ ಎಂದು ಯತ್ನಾಳ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES