Monday, January 6, 2025

ಭಾರತಕ್ಕೆ 8 ವಿಕೆಟ್​ಗಳ ಭರ್ಜರಿ ವಿಜಯ

ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳಿಂದ ಭರ್ಜರಿ ವಿಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 116 ರನ್​ಗಳಿಗೆ ಆಲೌಟ್​ ಆಗಿತ್ತು. 117 ರನ್​ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಭಾರತ ಕೇವಲ 16.4 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಹರಿಣಗಳ ವಿರುದ್ಧ ಅಂತರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಸಾಯಿ ಸುದರ್ಶನ್ ಚೊಚ್ಚಲ ಅರ್ಧಶತಕ (55*) ಸಿಡಿಸಿದರು. ಕ್ಲಾಸ್ ಬ್ಯಾಟರ್ ಶ್ರೇಯಸ್​ ಅಯ್ಯರ್ 52 ರನ್​ ಗಳಿಸಿದರು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 5 ಹಾಗೂ ತಿಲಕ್ ವರ್ಮಾ ಅಜೇಯ 1 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ವಿಯಾನ್ ಮುಲ್ಡರ್ ಹಾಗೂ ಆಂಡಿಲ್ ಫೆಹ್ಲುಕ್ವಾಯೊ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 27.3 ಓವರ್​ಗಳಲ್ಲಿ 116 ರನ್​ಗಳಿಗೆ ಆಲೌಟ್​ ಆಗಿತ್ತು. ಹರಿಣಗಳ ಪರ ಆಂಡಿಲ್ ಫೆಹ್ಲುಕ್ವಾಯೊ 33, ಟೋನಿ ಡಿ ಜೋರ್ಜಿ 28, ನಾಯಕ ಏಡೆನ್ ಮಾರ್ಕ್ರಾಮ್ 12 ರನ್ ಗಳಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ 5, ಅವೇಶ್​ ಖಾನ್ 4 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಕಬಳಿಸಿದರು.

RELATED ARTICLES

Related Articles

TRENDING ARTICLES