Sunday, January 26, 2025

ಶಾಲಾ ಮಕ್ಕಳಿಂದ ಮಲದಗುಂಡಿ ಸ್ವಚ್ಚತೆ ಪ್ರಕರಣ: ಸಿಎಂ ಪ್ರತಿಕ್ರಿಯೆ!

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳನ್ನು ಮಲದ ಗುಂಡಿ ಸ್ವಚ್ಚಕಾರ್ಯಕ್ಕೆ ಬಳಸಿಕೊಂಡ ವಿಚಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರದ ಮಾಲೂರು ಮಲದಗುಂಡಿ ಪ್ರಕರಣದಿಂದ ವಿಷಯ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ತರಿಸುತ್ತಿದ್ದೇನೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊವಿಡ್​ ಆತಂಕ: ಎಚ್ಚರಿಕೆ ವಹಿಸುವಂತೆ ವೈದ್ಯರ ಸೂಚನೆ!

ಶಾಲಾ ಮಕ್ಕಳನ್ನ ಶೌಚ ಗುಂಡಿಗೆ ಇಳಿಸಿದ ಪ್ರಕರಣ ಸಂಬಂಧ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕರಾದ ಅಭಿಷೇಕ್​​​​​​​, ಮುನಿಯಪ್ಪ, ವಾರ್ಡನ್​​​ ಮಂಜುನಾಥ್​ರನ್ನು​​ ಅಮಾನತು ಮಾಡಲಾಗಿದೆ. ಸಚಿವ ಡಾ.H.C.ಮಹದೇವಪ್ಪ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.  ಕ್ರಿಮಿನಲ್​​​ ಕೇಸ್​​ ದಾಖಲಿಸಲು ಸಚಿವರು ಸೂಚನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES