Thursday, December 19, 2024

ನನ್ನ ಸೋಲಿನ ಕಾರಣ ಏನು? ಕಾರಣ ಯಾರು? ಎಲ್ಲವನ್ನೂ ಹೈಕಮಾಂಡ್ ಮುಂದೆ ಹೇಳ್ತೀನಿ : ಸೋಮಣ್ಣ

ಮೈಸೂರು : ನನ್ನ ಸೋಲಿನ ವಿಚಾರ, ಅದಕ್ಕೆ ಕಾರಣ ಏನು? ಕಾರಣ ಯಾರು? ಎಲ್ಲವನ್ನೂ ಹೈಕಮಾಂಡ್ ಮುಂದೆಯೇ ವಿವರವಾಗಿ ಹೇಳುತ್ತೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಬೇಕಿದೆ. ಅದು ನನ್ನ ಪ್ರತಿಪಾದನೆ ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಜೊತೆ ಮಾತನಾಡಲು ಈಗ ಕಾಲ ಪಕ್ವವಾಗಿದೆ. ಡಿಸೆಂಬರ್ 19ರ ನಂತರ ನಾವು ನಾಲ್ಕೈದು ಜನ ಹೈಕಮಾಂಡ್ ಭೇಟಿ ಮಾಡುತ್ತೇವೆ. ಡಿಸೆಂಬರ್ 20, 21, 22 ಈ ದಿನಾಂಕದ ಒಳಗೆ ಹೈಕಮಾಂಡ್ ಭೇಟಿ ಮಾಡುತ್ತೇವೆ. ಹೈಕಮಾಂಡ್ ಜೊತೆ ಎಲ್ಲಾ ವಿಚಾರ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಏನು ಹೇಳುತ್ತದೋ ಆ ರೀತಿ ನಡೆದು ಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಸೋಮಶೇಖರ್ ಕಾಂಗ್ರೆಸ್​ನಿಂದ ಬಂದವ್ರು

ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರದ ಔತಣ ಕೂಟಕ್ಕೆ ಬಿಜೆಪಿ ಶಾಸಕರು ಹೋದ ವಿಚಾರ ಕುರಿತು ಮಾತನಾಡಿ, ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಪಕ್ಷದಿಂದ ಬಂದವರು. ಸೌಹಾರ್ದಯುತವಾಗಿ ಔತಣ ಕೂಟಕ್ಕೆ ಹೋಗಿರಬಹುದು. ಊಟಕ್ಕೆ ಹೋದ ತಕ್ಷಣ ಎಲ್ಲವೂ ಸರಿ ಇಲ್ಲ ಅಂತ ಅಂದು ಕೊಳ್ಳುವುದು ತಪ್ಪು ಎಂದು ಎಸ್​ಟಿಎಸ್ ನಡೆಯನ್ನು ವಿ. ಸೋಮಣ್ಣ ಸಮರ್ಥನೆ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES