Monday, December 23, 2024

ಹೊಸ ವರ್ಷಕ್ಕೆ ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ!

ಬೆಂಗಳೂರು: ಹೊಸ ವರ್ಷ ಹೊಸ್ತಿಲಿನಲ್ಲಿ ಮದ್ಯಪ್ರಿಯರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಅಬಕಾರಿ ಇಲಾಖೆಗೆ ಡಿಸೆಂಬರ್ ತಿಂಗಳಿನಲ್ಲಿ‌‌ ಮೂರು ಸಾವಿರ ಕೋಟಿ ಆದಾಯದ ಟಾರ್ಗೆಟ್ ನೀಡಲಾಗಿದೆ.

ವರ್ಷಾಂತ್ಯದಲ್ಲಿ ಬರುವ ಕ್ರಿಸ್ಮಸ್, ನ್ಯೂ ಇಯರ್​​​​ಗೆ ಅಬಕಾರಿ ಇಲಾಖೆ ಆದಾಯ ಹೆಚ್ಚಿಸಲು ಭರ್ಜರಿ ತಯಾರಿ ನಡೆಸಿದೆ. ಕಳೆದ 14 ದಿನದಲ್ಲಿ‌ ಮದ್ಯ ಮಾರಾಟದಲ್ಲಿ ಇಳಿಕೆ ಯಾಗಿದ್ದು, ಕಳೆದ ವರ್ಷ 14 ದಿನಗಳಲ್ಲಿ 24.50 ಲಕ್ಷ ಬಾಕ್ಸ್ IML ಮಾರಾಟವಾಗಿತ್ತು. ಆದರೆ ಈ ವರ್ಷ 14 ದಿನದಲ್ಲಿ 21.82 ಲಕ್ಷ IML ಬಾಕ್ಸ್ ಮದ್ಯ ಮಾರಾಟ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಶೇಕಡ 10ರಷ್ಟು ಮಾರಾಟ ಕುಸಿತವಾಗಿದೆ.

ಇದನ್ನೂ ಓದಿ: ಅಕ್ಕಿ ಬೆಲೆ ಭಾರಿ ಹೆಚ್ಚಳ: ಗ್ರಾಹಕರ ಜೇಬಿಗೆ ಮತ್ತೊಂದು ಹೊರೆ!

ಪ್ರತಿ ವರ್ಷ, ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಿನ್ನೆಲೆ ಅಡ್ವಾನ್ಸ್ ಆಗಿ ಮದ್ಯದ ಅಂಗಡಿಗಳು ಬಿಯರ್ ಹಾಗೂ IML ಬುಕ್ ಮಾಡುತ್ತಿದ್ದರು. ಆದರೇ ಈ ವರ್ಷ IML ಮದ್ಯ ಮಾರಾಟವಾಗದೇ ಸ್ಟಾಕ್ ಹಾಗೆಯೇ ಉಳಿದಿದೆ. ಹೀಗಾಗಿ ಇನ್ನೂ 14 ದಿನದಲ್ಲಿ 1818 ಕೋಟಿ ಸಂಗ್ರಹವಾದರೇ, ಅಬಕಾರಿ ಇಲಾಖೆ ಟಾರ್ಗೆಟ್ ರೀಚ್ ಮಾಡಬಹುದು.

RELATED ARTICLES

Related Articles

TRENDING ARTICLES