ಬೆಂಗಳೂರು: ಬಿಜೆಪಿ ಸರ್ಕಾರದ ನಮ್ಮ ಕ್ಲಿನಿಕ್ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ನಮ್ಮ ಕ್ಲಿನಿಕ್ ಗಳು ಹಳ್ಳ ಹಿಡಿತಾ ಇದಿಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಾಕವಿ ಕುವೆಂಪು ಮೆಟ್ರೋ ಬಳಿಯಿರುವ ಕ್ಲಿನಿಕ್ ಕಳೆದ 8 ತಿಂಗಳಿಂದ ಬಾಗಿಲು ತೆಗೆದಿಲ್ಲ. ಲಕ್ಷಾಂತರ ರೂಪಾಯಿ ಹಣ ವ್ಯರ್ಥವಾಗುತ್ತಿದೆ.
BBMP ನಿರ್ಲಕ್ಷ್ಯದಿಂದಾಗಿ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಕೂಡಲೆ ಆಸ್ಪತ್ರೆ ಪುನರಾರಂಭಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಬೆಂಗಳೂರಿನ ಮಹಾಕವಿ ಕುವೆಂಪು ಮೆಟ್ರೋ ಬಳಿಯಿರುವ ನಮ್ಮ ಕ್ಲಿನಿಕ್‌ಗೆ ಡಾಕ್ಟರ್ಗಳು ಬಾರದೆ ಬೀಗ ಬಿದ್ದಿದೆ.
ಬೀಗ ಹಾಕಿ 8 ತಿಂಗಳುಗಳೇ ಕಳೆದರು ಬಿಬಿಎಂಪಿ ನಿರ್ಲಕ್ಷ್ಯ ವಹಿಸುತ್ತಿದೆ. ಬೆಳಿಗ್ಗೆ, ಸಾಯಂಕಾಲ ಎರಡು ಪಾಳಿಯಲ್ಲಿ ನಮ್ಮ ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನರು ನಮ್ಮ ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರೋಗಿಗಳಿಗೆ ಉಪಯೋಗವಾಗಬೇಕಿದ್ದ ನಮ್ಮ ಕ್ಲಿನಿಕ್ಗಳಿಗೆ ಈಗ ಒಂದೊಂದಾಗಿ ಬೀಗ ಹಾಕಲಾಗುತ್ತಿದೆ.
ಇದನ್ನೂ ಓದಿ: ಎಚ್ಚರಿಕೆ: ಮತ್ತೆ ಕೋವಿಡ್ ಪ್ರಕರಣ ಏರಿಕೆ!
ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಕೂಡಲೆ ಆಸ್ಪತ್ರೆ ಪುನರಾರಂಭಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.