ತುಮಕೂರು : ವೈದ್ಯ ಶಾಸಕ ರಂಗನಾಥ್ ಅವರ ತವರು ಕ್ಷೇತ್ರದಲ್ಲಿಯೇ ಆಂಬುಲೆನ್ಸ್ ಸಿಗದೆ ರೋಗಿಗಳು ಪರದಾಡಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಉಜ್ಜನಿ ಅರಣ್ಯ ಪ್ರದೇಶದಲ್ಲಿ ಕಲ್ಲು ತುಂಬಿಕೊಂಡು ಹೊಗುತ್ತಿದ್ದ ಟ್ರಾಕ್ಟರ್ ಚಾಲಕನ ನಿಯತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಕೆಳಗೆ ಬಿದ್ದು ಗಾಯಗೊಂಡಿದ್ದ ಟ್ರಾಕ್ಟರ್ ಚಾಲಕನನ್ನು ಅದೇ ರಸ್ತೆಯಲ್ಲಿ ಹೊಗುತ್ತಿದ್ದ ಸಾರ್ವಜನಿಕರು ಗಮನಿಸಿ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ 108 ಆಂಬುಲೆನ್ಸ್ ಕರೆ ಮಾಡಿದ್ದಾರೆ.
ಆದರೆ, ಆಂಬುಲೆನ್ಸ್ ಲಭ್ಯವಿಲ್ಲದಿರುವ ಬಗ್ಗೆ ತಿಳಿಸಲಾಗಿದೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಟ್ರಾಕ್ಟರ್ ನಿಂದ ಬಿದ್ದು ಗಾಯಗೊಂಡಿದ್ದ ಲಕ್ಮ್ಷಿಪುರ ಗ್ರಾಮದ ಮಂಜು ಎಂಬಾತನನ್ನು ಒಂದು ಗಂಟೆಯ ಬಳಿಕ ಆಟೋದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆ ಕೊಡಿಸಲಾಗಿದೆ.
ವೈದ್ಯ ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ
ಕುಣಿಗಲ್ ತಾಲೂಕಿನಲ್ಲಿ ಒಟ್ಟು ನಾಲ್ಕು ಆಂಬುಲೆನ್ಸ್ ಗಳು ಕಾರ್ಯ ನಿರ್ವಹಿಸುತ್ತಿವೆ. ಅಪಘಾತದ ಸಮಯದಲ್ಲಿ ಯಾವುದೇ ಆಬುಂಲೆನ್ಸ್ ಲಭ್ಯವಿಲ್ಲದಿರುವುದು ನಿಜಕ್ಕೂ ದುರಂತ. ಇದು ವೈದ್ಯ ಶಾಸಕ ರಂಗನಾಥ್ ಅವರ ಕಾರ್ಯವೈಖರಿ ಹೇಗಿದೆ ಎಂಬುದು ತಿಳಿಸುತ್ತದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.