Wednesday, January 22, 2025

ಮೂರು ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೆಟ್ ಕೇಳಿದ್ದೇವೆ : ಜಮೀರ್ ಅಹ್ಮದ್

ಧಾರವಾಡ : ಮೂಂಬರುವ ಲೋಕಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಮುಸ್ಲಿಂರಿಗೆ ಟಿಕೆಟ್ ಕೇಳಿದ್ದೇವೆ ಎಂದು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಂಗಳೂರು ಸೆಂಟ್ರಲ್, ಹಾವೇರಿ ಹಾಗೂ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದೇವೆ ಎಂದು ತಿಳಿಸಿದರು.

ಎಲ್ಲ ಕ್ಷೇತ್ರಗಳಲ್ಲಿ ಲೋಕಸಭೆಗೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಜನ ಈಗ ತೀರ್ಮಾನ ತೆಗೆದುಕೊಂಡು ಆಗಿದೆ. ರಾಜ್ಯದಲ್ಲಿ ಕನಿಷ್ಠ 25 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಮೂರು ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೆಟ್ ಕೇಳಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತೆ?

ಸಂತಸ್ ಭವನದಲ್ಲಿ ಗಲಾಟೆ ಕಾಂಗ್ರೆಸ್ ಕುತಂತ್ರ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತೆ? ಅವರಿಗೆ ಪಾಸ್ ಕೊಟ್ಟವರು ಯಾರು? ಇದರಲ್ಲಿ ರಾಜಕೀಯ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಇದರಲ್ಲಿ‌ ಭದ್ರತಾ ವೈಫಲ್ಯ ಆಗಿದೆ. ಆತ ಪ್ರೇಕ್ಷಕರ ಗ್ಯಾಲರಿ ಮೇಲಿಂದ ಜಂಪ್ ಹೊಡೆದಿದ್ದಾರೆ. ಹೀಗಾದರೆ ಸೆಕ್ಯೂರಿಟಿ ವ್ಯವಸ್ಥೆ ಹೇಗಿದೆ ಅಲ್ಲಿ? ಎಂದು ಪ್ರಶ್ನಿಸಿದರು.

ನನ್ಗೆ ಇನ್ನೂ ಒಳಗೆ ಹೋಗಲು ಆಗಿಲ್ಲ

ಸಂಸತ್‌ನಲ್ಲಿ ಒಳಗೆ ಹೋಗಲು ಹತ್ತಾರು ಪ್ರಕ್ರಿಯೆ ಇದೆ. ಸಚಿವರು, ಶಾಸಕರು ಸಂಸತ್‌ ಒಳಗೆ ಹೋಗಲು ಅನೇಕ ಪ್ರಕ್ರಿಯೆ ಇವೆ. ಹಾಗಾದರೆ, ಆ ಹುಡುಗ ಹೇಗೆ ಒಳಗೆ ಹೋದ? ಸಿಎಂ, ಪ್ರಧಾನಿ ಭೇಟಿಯಾಗಬೇಕಾದರೂ ಅನೇಕ ಪ್ರಕ್ರಿಯೆ ಇವೆ. ಸಚಿವನಾಗಿ ನನಗೆ ಇನ್ನೂ ಲೋಕಸಭೆಗೆ ಹೋಗಲು ಆಗಿಲ್ಲ. ಹಾಗಾದರೆ ಇವನು ಹೇಗೆ ಹೋದ? ಎಂದು ಸಚಿವ ಜಮೀರ್ ಅಹ್ಮದ್ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES