Wednesday, January 22, 2025

ಸೌರಮಂಡಲದಲ್ಲಿ ಏಲಿಯನ್ಸ್ ಇರಬಹುದು : ಇಸ್ರೋ ವಿಜ್ಞಾನಿ ದಾರುಕೇಶ್

ರಾಯಚೂರು : ಸೌರಮಂಡಲದಲ್ಲಿ ಏಲಿಯನ್ಸ್ ಇರಬಹುದು, ಸಂಖ್ಯಾಶಾಸ್ತ್ರದ ಪ್ರಕಾರ 50,000 ಜೀವ ಇರಬೇಕು. ಅದರ ಒಂದು ಹುಡುಕಾಟದ ಪ್ರಯತ್ನ ನಡೆದಿದೆ ಎಂದು ಚಂದ್ರಯಾನ-3 ಇಸ್ರೋ ವಿಜ್ಞಾನಿ ಡಾ.ಬಿ.ಎಚ್‍.ಎಂ. ದಾರುಕೇಶ್ ಹೇಳಿದರು.

ರಾಯಚೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸಂವಾದ ಕಾರ್ಯಕ್ರಮದ ನಂತರ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಸಂವಾದದಲ್ಲಿ ಏಲಿಯನ್ಸ್ ಬಗ್ಗೆ ಹೆಚ್ಚು ಮಕ್ಕಳು ಪ್ರಶ್ನೆಗಳನ್ನ ಕೇಳಿದರು. ಅದು ತಪ್ಪಲ್ಲ ಏಲಿಯನ್ಸ್ ಗಳು ಇದ್ದರೂ ಇರಬಹುದು. ಕ್ಷೀರ ಪಥ, ಸೂರ್ಯ, ನಕ್ಷತ್ರ, ಭೂಮಿಯಂತಹ ಗ್ರಹಗಳನ್ನು ನೋಡಿದರೆ, ಸಂಖ್ಯೆ ಶಾಸ್ತ್ರಜ್ಞರು ಹೇಳುವ ಪ್ರಕಾರ 50,000 ಜೀವಗಳು ಇರಬೇಕು. ಅದರೇ ಇನ್ನು ಎರಡನೇ ಜಾಗ ಸಿಕ್ಕಿಲ್ಲ,‌ ಹುಡುಕಾಟ ನಡೆದಿದೆ ಎಂದು ತಿಳಿಸಿದರು.

ಸರ್ಚ್ ಫಾರ್ ಎಕ್ಸ್ರ್ಟಾ ಟೆಲಿಸ್ಕಾಲ್ ಇಂತವಾನೇನ್ ಎಕ್ಸ್ಪರಿಮೆಂಟ್ ನಡೆದಿದೆ. ವೈಯಜರ್ 1 ಮತ್ತು 2ರಲ್ಲಿ ಭೂಮಿಯ ಮೇಲೆ ಇರುವ 45 ಭಾಷೆಗಳಲ್ಲಿ ದಿಸ್ ಇಸ್ ಫ್ರಮ್ ಅರ್ಥ ಅಂತ ಮೆಸೇಜ್ ಹಾಕಿ, ಮನುಷ್ಯ, ಪ್ರಾಣಿ, ಭಾಷೆ ಸಂಖ್ಯೆಗಳು ಚಿತ್ರ ಹಾಕಲಾಗಿದೆ. ಇದರಿಂದ ಬೇರೆ ಜೀವ ಇರುವ ಕಡೆ ಹೋಗಿ, ಅಲ್ಲಿಂದ ಸಂದೇಶ ಬರಬಹುದು ಎಂಬ ಪ್ರಯತ್ನ ಮಾಡಲಾಗಿದೆ ಎಂದು ದಾರುಕೇಶ್ ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES