Sunday, December 22, 2024

ಮಿಸ್ಟರ್ ಯತ್ನಾಳ್, ಏನಾದರೂ ನುಡಿದಂತೆ ಇರುವ ಸರ್ಕಾರ ಅಂದ್ರೆ ಅದು ನಮ್ದೇ : ಸಿದ್ದರಾಮಯ್ಯ ಗುಡುಗು

ಬೆಳಗಾವಿ : ಮಿಸ್ಟರ್ ಯತ್ನಾಳ್, ನಾವು ಹೈ ಪವರ್ ಕಮಿಟಿ ಮಾಡ್ತೀವಿ, ಇದು ಒಂದನೇ ಘೋಷಣೆ. ನಾವು ಏನು ಹೇಳ್ತೀವಿ, ಅದನ್ನು ಮಾಡೇ ತೀರ್ತಿವಿ. ಏನಾದರೂ ನುಡಿದಂತೆ ಇರುವ ಸರ್ಕಾರ ಅಂದರೆ, ಅದು ನಮ್ದೇ ಸರ್ಕಾರ ಎಂದು ವಿಪಕ್ಷ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೇಲೆ‌ ನೀವು ಒತ್ತಡ ಹಾಕಿ, ನಾವು ನಾಳೆನೇ ಮಹದಾಯಿ ಶುರು ಮಾಡ್ತೀವಿ. ಮೇಕೆದಾಟು ಯೋಜನೆಗೂ ಡಿಪಿಎಆರ್ ಆಗಿದೆ. ಆದರೆ, ಕಾವೇರಿ ಪ್ರಾಧಿಕಾರ ನಮಗೆ ಅನುಮತಿ ಕೊಟ್ಟಿಲ್ಲ. ನೀರಾವರಿ ಮಾಡೋಕೆ ನಾವು ಹಿಂದೇಟು ಹಾಕಲ್ಲ ಎಂದು ಘರ್ಜಿಸಿದರು.

ಇಡೀ ರಾಜ್ಯದಲ್ಲಿ ಓಡಾಟ ಮಾಡ್ತೀವಿ ಅಂದ್ರು

ಸಾಲ ಮನ್ನಾ ಮಾಡದೇ ಹೋದ್ರೆ ಇಡೀ ರಾಜ್ಯ ಓಡಾಟ ಮಾಡ್ತೀವಿ ಅಂತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 2019ರಲ್ಲಿ ಅಧಿಕಾರಕ್ಕೆ ಬಂದಾಗ ನೀವು ಸಾಲ ಮನ್ನಾ ಮಾಡಿದ್ರಾ? ನಮ್ಮ ಹತ್ತಿರ ಪ್ರಿಂಟಿಂಗ್ ಮಷಿನ್ ಇದೆಯಾ? ಅಂತ ಯಡಿಯೂರಪ್ಪ ಅಂದ್ರು ಎಂದು ಚಾಟಿ ಬೀಸಿದರು.

ಕುಮಾರಸ್ವಾಮಿ ಸಾಲ ಮನ್ನಾ ಮಾಡಿದ್ರಲ್ಲಾ

ಈ ವೇಳೆ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, ನಮ್ಮ ಎನ್​ಡಿಎ ಪಾಟ್ನರ್ ಹೆಚ್.ಡಿ. ಕುಮಾರಸ್ವಾಮಿ ಸಾಲ ಮನ್ನಾ ಮಾಡಿದ್ರಲ್ಲಾ ಎಂದರು. ಅವರದ್ದು ಇರಲಿ, ನಿಮ್ದು ವಿರೋಧ ಪಕ್ಷ ಅಲ್ವೇನಪ್ಪ‌ ನಿಮ್ದು ಹೇಳ್ರಿ. ಏನೋ ಪಾಟ್ನರ್ ಅಂತೆ ಎಂದು‌ ಬಿಜೆಪಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆದರು.

10 ಕೆಜಿ ಅಕ್ಕಿ ಅಂದ್ರಲ್ಲಾ.. ಎಲ್ಲಿ ಹೋಯ್ತು?

ಏನು ವೀರವೇಷಾದಿಂದ ಭಾಷಣ ಮಾಡಿದ್ರೆ ಆಗುತ್ತಾ? ನಾವು ಐದು ಗ್ಯಾರಂಟಿಗಳನ್ನು ಜಾರಿಗೆ ಕೊಡ್ತೇವೆ. ಈ ವೀರಾವೇಷದ ಭಾಷಣ ಎಲ್ಲವನ್ನೂ ಜನರು ನಂಬಲ್ಲ. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಯತ್ನಾಳ್ ಅವರು, 10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರಲ್ಲಾ.. ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು. ಈ ವೇಳೆ‌ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಸಮರ, ಗದ್ದಲ ಏರ್ಪಟ್ಟಿತು.

RELATED ARTICLES

Related Articles

TRENDING ARTICLES