Monday, December 23, 2024

ರಾಷ್ಟ್ರದ ಅಭಿವೃದ್ಧಿಗೆ ನರೇಂದ್ರ ಮೋದಿ ಬೇಕು: ಮಾಜಿ ಸಚಿವ ವಿ.ಸೋಮಣ್ಣ

ತುಮಕೂರು: ರಾಷ್ಟ್ರದ ಅಭಿವೃದ್ಧಿಗೆ ನರೇಂದ್ರ ಮೋದಿ ಬೇಕು ಎಂದು ಮಾಜಿ ವಿ.ಸೋಮಣ್ಣ ಹೇಳಿದ್ದಾರೆ.

ನಗರದ ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಮಾತನಾಡಿದ ಅವರು ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಸುಳ್ಳು ವಿಚಾರ, ಚುನಾವಣೆ ನಿಲ್ಲೋದು ಬಿಡೋದು ಅನ್ನುವುದಕ್ಕಿಂತ ಹೆಚ್ಚಾಗಿ ನನಗೆ ಅದರ ಅವಶ್ಯಕತೆಯಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ದೇಶದ ಜನ ಅಲ್ಲ ಇಡೀ ಜಗತ್ತಿನ  ಜನ ಇವತ್ತಿನ ಸಂದರ್ಭ, ಸನ್ನಿವೇಶಕ್ಕೆ ಮೋದಿಯವರ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳುತ್ತಿದ್ದಾರೆ. ಮೋದಿ ಇಲ್ಲದಿದ್ದರೆ ದೇಶದ ಪರಿಸ್ಥಿತಿ  ಬೇರೆಯಾಗುತ್ತಿತ್ತು ಹಾಗಾಗಿ ದೇಶದ ಬಗ್ಗೆ ಚಿಂತನೆ ಮಾಡೋಣ ಎಂದರು.

ಇದನ್ನೂ ಓದಿ: ಘಾಟಿ ದೇವಸ್ಥಾನದಲ್ಲಿ ಜ.31ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ!

ನಾನು ಕನಸಿನಲ್ಲೂ ಯೋಚಿಸಿಲ್ಲ ಕಾಂಗ್ರೆಸ್​ ಪಕ್ಷ ಸೇರುವುದನ್ನು 

ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದನ್ನು ಕನಸಿನಲ್ಲಿಯೂ ಕಂಡಿಲ್ಲ. ಯೋಚನೆಯೂ ಮಾಡಿಲ್ಲ. ಚುನಾವಣೆ ನಿಲ್ಲೋದು ಬಿಡೋದು ಅನ್ನುವುದಕ್ಕಿಂತ ಹೆಚ್ಚಾಗಿ ಅದರ ಅವಶ್ಯಕತೆಯಿಲ್ಲ. ವೈಯಕ್ತಿಯ ರಾಜಕೀಯ ಇದೀಗ ಮಾತನಾಡಲಾರೆ, ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ ಎಂದರು.

ಮೋದಿ ಸರ್ಕಾರ ಆರ್ಟಿಕಲ್ ೩೭೦ ರದ್ದುಪಡಿಸಿತ್ತು. ಆದರೆ, ಅದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರೂ ಆಗ ಸುಪ್ರೀಂಕೋರ್ಟ್ ನಲ್ಲಿ ಏನಾಗುತ್ತದೋ ಎಂಬ ಆತಂಕ ಎಲ್ಲರಲ್ಲಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಒಳ್ಳೇಯ ತೀರ್ಪು ನೀಡಿದೆ. ದೇಶದ ಅಭೀವೃದ್ದಿಗೆ ಪೂರಕವಾಗಿದೆ. ಸರ್ವಾಂಗೀಣ ಅಭಿವೃದ್ದಿಗೆ ಮೋದಿಯವರು ಬೇಕಾಗಿದೆ ಎಂದರು.

 

RELATED ARTICLES

Related Articles

TRENDING ARTICLES