Thursday, December 19, 2024

ಪಬ್ಲಿಸಿಟಿಗಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಸಚಿವ ಮಧು ಬಂಗಾರಪ್ಪ

ಬೆಳಗಾವಿ: ಉತ್ತರ ಕರ್ನಾಟಕ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವ ಬದಲು ಬಿಜೆಪಿಯವರು ಪಬ್ಲಿಸಿಟಿಗಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು,ಉತ್ತರ ಕರ್ನಾಟಕದ ಸಮಸ್ಯೆಯ ಚರ್ಚೆಗೆ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ. ಆದರೆ ಚರ್ಚೆ ಮಾಡಬೇಕಿದ್ದ ಬಿಜೆಪಿ ಪಬ್ಲಿಸಿಟಿ ಸಲುವಾಗಿ ಬೆಳಗಾವಿ ಅಧಿವೇಶನವನ್ನು ಬಿಜೆಪಿಯವರು ಬಳಸಿಕೊಳ್ಳುತ್ತಿರುವುದು ಸರಿಯಿಲ್ಲ ಎಂದರು.

ಇದನ್ನೂ ಓದಿ: ದೇಶದಲ್ಲೇ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯ ನಮ್ಮದಾಗಬೇಕು: ಸಿದ್ದರಾಮಯ್ಯ

ಪಬ್ಲಿಸಿಟಿಗಾಗಿ ರಾಜಕೀಯ ಮಾಡಿದ್ರೆ ಮತ್ತೇ ವಿರೋಧ ಪಕ್ಷವೇ ಗತಿ 

ಬಿಜೆಪಿಯವರು ಇದೇ ರೀತಿ ಜನರ ಸಮಸ್ಯೆ ಚರ್ಚೆ ಮಾಡುವ ಬದಲು ಪಬ್ಲಿಸಿಟಿ ಸಲುವಾಗಿ ರಾಜಕೀಯ ಮಾಡುತ್ತಿದ್ದರೆ ಮತ್ತೇ ರಾಜ್ಯದ ಜನ ಅವರನ್ನು ವಿರೋಧ ಪಕ್ಷದಲ್ಲಿ ಕುಳಿಸುತ್ತಾರೆ.

ಸರ್ಕಾರ ರಾಜ್ಯದ ಸಮಸ್ಯೆಯ ಬಗ್ಗೆ ಹೆಚ್ಚಿನ ಆಧ್ಯತೆ ನೀಡಿ ಪರಿಹರಿಸುವ ಕೆಲಸ ಮಾಡುತ್ತಿದ್ದೆ ಎಂದರು.

RELATED ARTICLES

Related Articles

TRENDING ARTICLES