Monday, December 23, 2024

Parliament Security Breach: ಏನಿದು ಆಗಂತುಕರು ಸಿಂಪಡಿಸಿದ ಕಲರ್‌ ಸ್ಮೋಕ್‌ ಬಾಂಬ್ .? ಇದು ಅಪಾಯಕಾರಿಯೇ?

ದೆಹಲಿ: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಸದನದೊಳಗೆ ನುಗ್ಗಿದ ಇಬ್ಬರು ಆಗಂತುಕರು ಸಿಂಪಡಿಸಿದ ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇದು ಅಪಾಯಕಾರಿಯೇ? ಇದರಲ್ಲಿ ವಿಷಾನಿಲ ತುಂಬಿರುತ್ತದೆಯೇ? ಎಂಬಿತ್ಯಾದಿ ಚರ್ಚೆಗಳಿಗೆ ಇಲ್ಲಿದೆ ಉತ್ತರ. 

ಇದು ಅಪಾಯಕಾರಿಯಾಗಿರಲಿಲ್ಲ. ಇಂಥ ಬಣ್ಣ ಬಣ್ಣದ ಹೊಗೆ ಸಿಂಪಡಿಸುವ ಕ್ಯಾನ್‌ಗಳು ರಿಟೇಲ್ ಇದು ಮಳಿಗೆಗಳಲ್ಲೂ ಲಭ್ಯ. ವಿದೇಶಗಳಲ್ಲಿ ಇದರ ಬಳಕೆ ವ್ಯಾಪಕವಾಗಿದೆ.

ಸ್ಕೋಕ್ ಕ್ಯಾನ್ ಅಥವಾ ಸ್ಕೋಕ್ ಬಾಂಬ್ ಎಂದು ಕರೆಯಲಾಗುವ ಇವುಗಳನ್ನು ಕ್ರೀಡೆಗಳಲ್ಲಿ, ಫೋಟೊ ಶೂಟ್ ಸಂದರ್ಭದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಜತೆಗೆ ಸೇನೆಯಲ್ಲೂ ಬಳಸುತ್ತಾರೆ. ಸೇನೆಯಲ್ಲಿ ಶತ್ರುಗಳ ಕೈಗೆ ಸಿಕ್ಕಾಗ. ತಮ್ಮವರಿಗೆ ಅಪಾಯದ ಸೂಚನೆ ನೀಡಲು ಸ್ಕೋಕ್ ಬಾಂಬ್ ಬಳಸುವ ಪದ್ಧತಿ ಇದೆ. ಇನ್ನೂ ಕೆಲವೊಮ್ಮೆ ವೈಮಾನಿಕ ದಾಳಿ ಸಂದರ್ಭದಲ್ಲಿ, ತುಕಡಿಗಳನ್ನು ಧರೆಗಿಳಿಸುವ ಸಂದರ್ಭದಲ್ಲೂ ಬಳಸಲಾಗುತ್ತದೆ.

ಇದನ್ನೂ ಓದಿ: Security Breach in Lok Sabha: ಲೋಕಸಭೆ ಭದ್ರತೆ ಲೋಪ; ನಾಲ್ವರ ಅರೆಸ್ಟ್ ಯಾರಿವರು, ಅವರ…

ಛಾಯಾಚಿತ್ರ ತೆಗೆಯುವ ಸಂದರ್ಭದಲ್ಲಿ ವಿಶೇಷ ಎಫೆಕ್ಟ್ ನೀಡಲು ಇಂಥ ಬಣ್ಣ ಬಣ್ಣದ ಸ್ಕೋಕ್ ಬಾಂಬ್‌ಗಳನ್ನು ಬಳಸಲಾಗುತ್ತಿದೆ. ಇದರೊಂದಿಗೆ ಹಲವು ದೇಶಗಳಲ್ಲಿ ಫುಟ್‌ಬಾಲ್ ಹಾಗೂ ಇನ್ನಿತರ ಕ್ರೀಡೆಗಳ ಸಂದರ್ಭದಲ್ಲಿ ಇದನ್ನು ಬಳಸಲಾಗುತ್ತಿದೆ. ಇದರಿಂದ ಯಾವುದೇ ಅಪಾಯವಿಲ್ಲ ಎಂದಿದ್ದಾರೆ.

ಇನ್ನೂ ಸಂಸತ್ ಒಳಗೆ ಹಾರಿಸಲಾದ ಹಳದಿ ಬಣ್ಣದ ಹೊಗೆ ಅಪಾಯಕಾರಿ ಅಲ್ಲ ಎಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆ ನಡೆಸಿ ಹೇಳಿದ್ದಾರೆ.

 

 

RELATED ARTICLES

Related Articles

TRENDING ARTICLES