Sunday, January 19, 2025

ಸ್ಪೀಕರ್ ಪೀಠದಲ್ಲಿ ಕುಳಿತ ಶಾಸಕ ರಂಗನಾಥ್ ಅಚಾತುರ್ಯ!

ಬೆಳಗಾವಿ : ವಿಧಾನಸಭೆಯಲ್ಲಿ ಸ್ವೀಕರ್​ ಪೀಠ ಬಿಟ್ಟುಕೊಡಲು ಕುಣಿಗಲ್​​ ಶಾಸಕ ಡಾ.ಹೆಚ್​.ಡಿ. ರಂಗನಾಥ್ ಸತಾಯಿಸಿದ್ದಾರೆ.

ಸಭಾಧ್ಯಕ್ಷ ಯು‌.ಟಿ. ಖಾದರ್ ಸ್ಪೀಕರ್ ಪೀಠದಿಂದ ನಿರ್ಗಮಿಸಿದ ಬಳಿಕ ಪೀಠದಲ್ಲಿ ಕುಣಿಗಲ್ ಶಾಸಕ ಡಾ.ಹೆಚ್.ಡಿ. ರಂಗನಾಥ್ ಆಸೀನರಾಗಿದ್ದರು. ಸ್ಪೀಕರ್ ಯು.ಟಿ. ಖಾದರ್​​​​ ಪೀಠದಿಂದ ನಿರ್ಗಮಿಸುವ ವೇಳೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಸದನದಲ್ಲಿ ಉಪಸ್ಥಿತರಿರಲಿಲ್ಲ. ಈ ಹಿನ್ನೆಲೆ ನಿಯಮ 9ರ ಅಡಿಯಲ್ಲಿ ನಾಮನಿರ್ದೇಶನಗೊಂಡಿರುವ ಶಾಸಕ ರಂಗನಾಥ್ ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದರು.

ನಂತರ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಸದನಕ್ಕೆ ಬಂದಿದ್ದಾರೆ. ಈ ವೇಳೆ ರಂಗನಾಥ್​​ ಡೆಪ್ಯುಟಿ ಸ್ಪೀಕರ್​ಗೆ ಸ್ಪೀಕರ್ ಪೀಠ ಬಿಟ್ಟುಕೊಡಲು ವಿಳಂಬ ಮಾಡಿದ್ದಾರೆ. ಹೀಗಾಗಿ, ರುದ್ರಪ್ಪ ಲಮಾಣಿ ಡೆಪ್ಯುಟಿ ಸ್ಪೀಕರ್ ಆಸನದಲ್ಲೇ ಕುಳಿತರು. ಇದನ್ನು ವಿಪಕ್ಷ ನಾಯಕ ಆರ್​. ಅಶೋಕ್​​ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದಾರೆ.

ಆಗ‌ ಸಿಎಂ ಸಿದ್ದರಾಮಯ್ಯ ಅವರು ಸ್ಪೀಕರ್​​​ ಪೀಠದಲ್ಲಿ ಆಸೀನರಾಗುವಂತೆ ಡೆಪ್ಯುಟಿ ಸ್ಪೀಕರ್​ ರುದ್ರಪ್ಪ ಲಮಾಣಿಗೆ ಸನ್ನೆ ಮಾಡಿದ್ದಾರೆ. ನಂತರ ರುದ್ರಪ್ಪ ಲಮಾಣಿ ಸ್ಪೀಕರ್ ಪೀಠದತ್ತ ತೆರಳಿದ್ದಾರೆ. ಆ ಬಳಿಕ ಶಾಸಕ ರಂಗನಾಥ್​​​ ಸ್ಪೀಕರ್ ಪೀಠ ಬಿಟ್ಟುಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES