Sunday, December 22, 2024

ನಡುರಸ್ತೆಯಲ್ಲೇ ಲೇಡಿ ಪಿಎಸ್ಐಗೆ ಚಳಿ ಬಿಡಿಸಿದ ಶಾಸಕಿ ಕರೆಮ್ಮ

ರಾಯಚೂರು : ಮರಳು ತಪಾಸಣಾ ಕೇಂದ್ರದ ಮುಂದೆ ತಡರಾತ್ರಿ ಅಕ್ರಮ ಮರಳು ಸಾಗಾಟ ವೇಳೆ ಟಿಪ್ಪರ್ ಲಾರಿಗಳು ಶಾಸಕಿ ಕೈಯಲ್ಲಿ ರೆಡ್ಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿವೆ. ಆಕ್ರೋಶಗೊಂಡ ಅವರು, ಕೂಡಲೇ ಸ್ಥಳಕ್ಕೆ ಪಿಎಸ್ಐ ಅವರನ್ನು ಸ್ಥಳಕ್ಕೆ ಕರೆಸಿ ನಡುರಸ್ತೆಯಲ್ಲೇ ಚಳಿ ಬಿಡಿಸಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಬೆಳಗಾವಿ ಅಧಿವೇಶನದಿಂದ ವಾಪಸ್ ಬರುತ್ತಿದ್ದ ಶಾಸಕಿ ಕರೆಮ್ಮ ಜಿ. ನಾಯಕ್ ಅವರ ಕೈಗೆ ದಂಧೆಕೋರರು ಸಿಕ್ಕಿಬಿದ್ದಾರೆ.

ಟಿಪ್ಪರ್ ಗಳು ಅಕ್ರಮವಾಗಿ ಮರಳು ಸಾಗಿಸುತ್ತಿದ್ದರೂ ಕ್ರಮ ಕೈಗೊಳ್ಳದ ತಪಾಸಣಾ ಕೇಂದ್ರ ಸಿಬ್ಬಂದಿಗಳನ್ನು ಕಂಡು ಅಸಮಧಾನಗೊಂಡಿದ್ದಾರೆ. ದೇವದುರ್ಗ ತಾಲೂಕಿನಲ್ಲಿ ಅಕ್ರಮ ದಂಧೆಗಳು ಮೀತಿ ಮೀರಿದೆ. ಅಕ್ರಮ ದಂಧೆಗಳಿಂದ ಬೇಸತ್ತ ದೇವದುರ್ಗ ಶಾಸಕಿ ಕರೆಯಮ್ಮ ಜಿ. ನಾಯಕ ಅವರು, ತಕ್ಷಣ ಜಾಲಹಳ್ಳಿ PSIರನ್ನ ಸ್ಥಳಕ್ಕೆ ಕರೆಯಿಸಿ ಚಳಿ ಬಿಡಿಸಿದ್ದಾರೆ.

ದಂಧೆಕೋರರಿಗೆ ಸಾಥ್ ಕೊಡ್ತಿದ್ದೀರಾ?

ನಡು ರಸ್ತೆಯಲ್ಲಿ ರಾತ್ರಿ ಜಾಲಹಳ್ಳಿ ಪಿಎಸ್​ಐ ಸುಜಾತ ಅವರಿಗೆ ಫುಲ್ ಚಾರ್ಜ್ ಮಾಡಿದ ಶಾಸಕಿ ಕೆಂಡಾಮಂಡಲರಾಗಿದ್ದಾರೆ. ಶಾಸಕಿಯ ಪ್ರಶ್ನೆಗೆ ಉತ್ತರ ಕೊಡದೇ ಪಿಎಸ್ಐ ಸುಜಾತ ಅವರು ತಬ್ಬಿಬ್ಬಾಗಿದ್ದಾರೆ. ಅಕ್ರಮ ಮರಳು, ಮಟ್ಕ್, ಜೂಜಾಟ ಎಗ್ಗಿಲ್ಲದೆ ನಡೆದಿದೆ ಏನ್ ಮಾಡುತ್ತಾ ಇದ್ದೀರಾ? ಇಷ್ಟೆಲ್ಲ‌ ಅಕ್ರಮ ನಡೆದ್ರೂ ದಂಧೆಕೋರರಿಗೆ ಯಾಕೆ ಸಾಥ್ ಕೊಡುತ್ತಿದ್ದೀರಾ? ಎಂದು ಗರಂ ಆಗಿದ್ದಾರೆ.

ದಂಧೆಕೋರರ ಮೇಲೆ ಕೇಸ್ ದಾಖಲಿಸಿ

ಕ್ಷೇತ್ರದ ಜನರು ನನ್ನ ಮೇಲೆ‌ ನಂಬಿಕೆ ಇಟ್ಟು ನನ್ನನ್ನ ಗೆಲ್ಲಿಸಿದ್ದಾರೆ‌. ಅಕ್ರಮ‌ ದಂಧೆ ಕಡಿವಾಣ ಹಾಕಬೇಕಾದ ಪೊಲೀಸರು ಯಾಕೆ ಸುಮ್ಮಿನಿದ್ದೀರಾ? ತಕ್ಷಣ ಅಕ್ರಮ ಮರಳು ದಂಧೆಕೋರರ ಮೇಲೆ ಕೇಸ್ ದಾಖಲಿಸಿ, ಟಿಪ್ಪರ್ ವಾಹನಗಳನ್ನ ಸೀಜ್ ಮಾಡುವಂತೆ ಶಾಸಕಿ ತಾಕೀತು ಮಾಡಿದ್ದಾರೆ.

RELATED ARTICLES

Related Articles

TRENDING ARTICLES