Wednesday, January 22, 2025

2040ರ ಹೊತ್ತಿಗೆ ಚಂದ್ರನಲ್ಲಿಗೆ ಮೊದಲ ಗಗನಯಾನಿ : ಇಸ್ರೋ ಅಧ್ಯಕ್ಷ ಸೋಮಾನಾಥ್

ಬೆಂಗಳೂರು : 2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮೊದಲ ಗಗನಯಾನಿಯನ್ನು ಕಳುಹಿಸುವ ಯೋಜನೆ ಹೊಂದಿರುವುದಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

ಮನೋರಮಾ ಇಯರ್ಬುಕ್ 2024ಕ್ಕೆ ಬರೆದ ವಿಶೇಷ ಲೇಖನದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ‘ಗಗನಯಾನ’ ಎಂಬ ಯೋಜನೆಯಡಿ ಸದ್ಯ ಭೂಮಿಯ ಕೆಳ ಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಿ, ಮೂರು ದಿನಗಳ ನಂತರ ಅವರನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವ ಚೊಚ್ಚಲ ಯೋಜನೆಯ ಸಿದ್ಧತೆಯಲ್ಲಿದ್ದೇವೆ. ಇದಕ್ಕಾಗಿ ಭಾರತೀಯ ವಾಯುಪಡೆಯ ನಾಲ್ವರು ಪೈಲೆಟ್​​ಗಳೂ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ಸದ್ಯ ಇವರು ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಾನವಸಹಿತ ಗಗನಯಾನಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ. ಇದರಲ್ಲಿ ಗಗನಯಾನಿಗಳನ್ನು ಸುರಕ್ಷಿತವಾಗಿ ಕರೆದೊಯ್ಯುವ ವಾಹನ, ಅವರು ಬಾಹ್ಯಾಕಾಶದಲ್ಲಿ ಇರಲು ಅನುಕೂಲಕರವಾದ ನೌಕೆ, ಅದರಲ್ಲಿ ಅವರ ಸುರಕ್ಷತೆಗೆ ಅಗತ್ಯವಿರುವ ಸಾಧನಗಳನ್ನು ಅಳವಡಿಸುವ ಕಾರ್ಯದಲ್ಲಿ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES