Monday, December 23, 2024

ಜಸ್ಟ್ 150 ರೂ.ಗೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಚಿತ್ರದುರ್ಗ : 150 ರೂಪಾಯಿ ಸಾಲದ ಹಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಕೊಡಗವಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಡಗವಳ್ಳಿ ಗ್ರಾಮದ ನಾಗರಾಜಪ್ಪ (63) ಹತ್ಯೆಯಾದ ವ್ಯಕ್ತಿ. ಶೇಖರಪ್ಪ (65) ಮೃತ ನಾಗರಾಜಪ್ಪನಿಗೆ 150 ರೂ. ಹಣವನ್ನು ಸಾಲವಾಗಿ ನೀಡಿದ್ದ. ಆದರೆ, ಸಾಲ ವಾಪಸ್​ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ತಾನು ನಿಡಿದ್ದ ಸಾಲ ವಾಪಸ್ ನೀಡುವುದಾಗಿ ದೇವಸ್ಥಾನದಲ್ಲಿ ನಾಗರಾಜಪ್ಪ ಆಣೆ ಮಾಡಿದ್ದ. ಆಣೆ ಮಾಡಿದರೂ ಬಿಡದೇ ನಾಗರಾಜಪ್ಪನ ಜೊತೆ ಶೇಖರಪ್ಪ ಜಗಳ ಮಾಡಿದ್ದಾನೆ. ಜಗಳದ ವೇಳೆ ಶೇಖರಪ್ಪ ಆತುರದಲ್ಲಿ ನಾಗರಾಜಪ್ಪನನ್ನು ಹಿಂದಕ್ಕೆ ತಳ್ಳಿದ್ದಾನೆ. ಈ ವೇಳೆ ನಾಗರಾಜಪ್ಪನ ತಲೆ ಕಲ್ಲಿಗೆ ಬಡಿದು ಗಾಯವಾಗಿದೆ.

ಕೂಡಲೇ ನಾಗರಾಜಪ್ಪರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನಾಗರಾಜಪ್ಪ ಸಾವನಪ್ಪಿದ್ದಾರೆ. ಈ ಸಂಬಂಧ ಘಟನಾ ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶೇಖರಪ್ಪನನ್ನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES