ಬೆಂಗಳೂರು: ಆ್ಯಂಬುಲೆನ್ಸ್‌ಗಳು ಅದೆಷ್ಟೋ ಜನರ ಪಾಲಿಗೆ ಮರುಜನ್ಮ ನೀಡಿದೆ. ಆ್ಯಂಬುಲೆನ್ಸ್ ಚಾಲಕರು ಪರರ ಪ್ರಾಣಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಉಸಿರು ಹೋಗುವ ಜೀವಗಳಿಗೆ ಮರುಜನ್ಮ ಸಿಗುತ್ತಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗಿರುವ ಟ್ರಾಫಿಕ್ ರೋಗಿಗಳ ಜೀವಕ್ಕೆ ಆಪತ್ತು ತರ್ತಿದೆ.
ಸೈರನ್ ಎಷ್ಟೇ ಕೂಗಿದ್ರು ಟ್ರಾಫಿಕ್ ಜಾಮ್ ಮಾತ್ರ ಕಮ್ಮಿಯಾಗುತ್ತಿಲ್ಲ. ಹೀಗಾಗಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಬೆಂಗಳೂರು ಸಂಚಾರ ಪೊಲೀಸರು ಹೊಸ ಉಪಾಯ ಕಂಡುಕೊಳ್ಳುತ್ತಿದ್ದಾರೆ. ನೂತನ ಆ್ಯಪ್ ಸಿದ್ಧಪಡಿಸುತ್ತಿದ್ದಾರೆ ಇದಕ್ಕೆ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 73ನೇ ಜನ್ಮದಿನದ ಸಂಭ್ರಮದಲ್ಲಿ ಸೂಪರ್ಸ್ಟಾರ್ ರಜನಿಕಾಂತ್!
ಮೊದಲು ಆ್ಯಂಬುಲೆನ್ಸ್‌ಗಳು ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿಬೇಕು. ಅದನ್ನು ಸಂಚಾರ ನಿರ್ವಹಣ ಕೇಂದ್ರ ಸಿಬ್ಬಂದಿ ಪರಿಶೀಲಿಸಿ ಅವರು ಟ್ರಾಫಿಕ್ ಇಲ್ಲದ ರಸ್ತೆಯನ್ನು ಸೂಚಿಸುತ್ತಾರೆ. ಹಾಗೆಯೇ ಒಂದೇ ಸಿಗ್ನಲ್‌ನಲ್ಲಿ 60 ಸೆಕೆಂಡ್‌ಗೂ ಹೆಚ್ಚು ಕಾಲ ನಿಂತಿದ್ದರೆ. ಆ್ಯಂಬುಲೆನ್ಸ್ ಸಂಚರಿಸುವ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಲಾಗುತ್ತೆ. ಅಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತೆ.
ಈ ಬಗ್ಗೆ ಆ್ಯಪ್ ಡೆವಲಪರ್‌ಗಳ ಜೊತೆಯೂ ಒಂದು ಸುತ್ತಿನ ಚರ್ಚೆ ಯಾಗಿದೆ. ಸದ್ಯದಲ್ಲಿ ಆ್ಯಪ್ ಲಾಂಚ್ ಆಗಲಿದೆ ಎಂದು ಜಂಟಿ ಪೋಲಿಸ್ ಆಯುಕ್ತ ಅನುಚೇತ್ ತಿಳಿಸಿದ್ದಾರೆ.