ಬೆಂಗಳೂರು : ರಾಜಸ್ಥಾನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಅವರಹೆಸರನ್ನು ರಾಜ್ಯ ಬಿಜೆಪಿ ಘೋಷಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿದೆ.
ಮೊದಲ ಬಾರಿಯ ಶಾಸಕರಾಗಿ ಆಯ್ಕೆಯಾಗಿರುವ ಭಜನ್‌ಲಾಲ್ ಶರ್ಮ ಅವರನ್ನು ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಸರ್ಪ್ರೈಸ್ ನೀಡಿದೆ.
ಬ್ರಾಹ್ಮಣ ಸಮುದಾಯಕ್ಕೆ ಮಣೆ
ಭಜನ್‌ಲಾಲ್ ಶರ್ಮ ಅವರು ರಾಜಸ್ಥಾನದ ಸಂಗಾನೇರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಶಾಸಕರಾಗಿ ಆಯ್ಕೆಯಾದ ಮೊದಲ ಬಾರಿಯೇ ಮುಖ್ಯಮಂತ್ರಿಯೂ ಆಯ್ಕೆಗೊಂಡಿದ್ದಾರೆ. ಭರತ್‌ಪುರ ಮೂಲದ ಭಜನ್‌ಲಾಲ್ ಶರ್ಮ ಅವರು ಬ್ರಾಹ್ಮಣ ಸಮುದಾಯದವರಾಗಿದ್ದಾರೆ.
ನಾಲ್ಕು ಬಾರಿ ರಾಜಸ್ಥಾನದ ಬಿಜೆಪಿ ಮುಖ್ಯ ಕಾರ್ಯದರ್ಶಿಯಾಗಿ ಭಜನ್‌ಲಾಲ್ ಶರ್ಮ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ. ಛತ್ತೀಸ್ಗಢ ಹಾಗೂ ಮಧ್ಯಪ್ರದೇಶ ಬಳಿಕ ರಾಜಸ್ಥಾನದಲ್ಲೂ ಬಿಜೆಪಿ ಹೈಕಮಾಂಡ್ ಹೊಸ ಮುಖ ಕ್ಕೇ ಮಣೆ ಹಾಕಿದೆ.
ಇಬ್ಬರು ಡಿಸಿಎಂ ಆಯ್ಕೆ
ಭಜನ್‌ಲಾಲ್ ಶರ್ಮ ಜೊತೆ ಇಬ್ಬರು ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ರೇಸ್‌ನಲ್ಲಿ ರಾಜ ಕುಟುಂಬದ ದಿಯಾ ಕುಮಾರಿ ಹಾಗೂ ಪ್ರೇಮ್‌ಚಂದ್ ಬೈರವಾ ಅವರನ್ನು ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡಲಾಗಿದೆ. ಇನ್ನೂ, ಸ್ಪೀಕರ್ ಆಗಿ ವಾಸುದೇವ್ ದೇವನಾನಿ ಆಯ್ಕೆಯಾಗಿದ್ದಾರೆ.