Sunday, January 19, 2025

ಮಂಗಳಮುಖಿಯ ‘ಮಂಗಳ’ ಕಾರ್ಯ : ಭಿಕ್ಷಾಟನೆ ಮಾಡಿ ಸಮಾಜಮುಖಿ ಕೆಲಸ

ಕೊಪ್ಪಳ : ಮಂಗಳಮುಖಿಯರು ಎಂದಾಕ್ಷಣ ಎಲ್ಲರಲ್ಲೂ ಒಂದು ಕೀಳರಿಮೆ ಬರುವುದು ಸಹಜ. ಅವರನ್ನು ಕಂಡರೆ ಏನೋ ಒಂಥರಾ ನೋಡೋರೇ ಹೆಚ್ಚು. ಅವರು ನಮ್ಮಂತೆಯೇ ಮನುಷ್ಯರೇ ಎನ್ನುವುದನ್ನು ಮರತಂತೆ ವರ್ತಸುತ್ತೇವೆ. ಆದರೆ, ಇಲ್ಲೊಬ್ಬ ಮಂಗಳಮುಖಿ ಹೆಸರಿಗೆ ತಕ್ಕಂತೆ ಮಂಗಳ ಕಾರ್ಯವೊಂದನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಬೆಂಗಳೂರಿನಂತಹ ದೊಡ್ಡದೊಡ್ಡ ನಗರಗಳ ಟ್ರಾಫಿಕ್ ಸಿಗ್ನಲ್‌, ಟೋಲ್ ಗೇಟ್‌, ರೈಲುಗಳಲ್ಲಿ ಮಂಗಳಮುಖಿಯರು ಭಿಕ್ಷಾಟನೆ ಮಾಡುತ್ತಿರುವ ದೃಶ್ಯಗಳನ್ನು ನಾವು ನೀವೆಲ್ಲಾ ನೋಡುತ್ತಿರುತ್ತೇವೆ. ಮಂಗಳಮುಖಿಯರ ಈ ಭಿಕ್ಷಾಟನೆ ಬಹಳಷ್ಟು ಜನರಿಗೆ ಕಿರಿಕಿರಿ ಉಂಟು ಮಾಡುವುದೇ ಹೆಚ್ಚು.

ಹೀಗೆ ಅಂದುಕೊಳ್ಳುವವರು ಕೊಪ್ಪಳ ಜಿಲ್ಲೆಯ ಕಾರಟಗಿ ಬಳಿಯ ಬೇನ್ನೂರು ಗ್ರಾಮದ ಮಂಗಳಮುಖಿ ಜಮುನಾ ಜೋಗತಿ ಅವರ ಸಮಾಜಮುಖಿ ಸೇವೆಯನ್ನು ನೋಡಲೇಬೇಕಿದೆ. ಇವರು ಸಮಾಜಮುಖಿ ಕೆಲಸಗಳಿಗಾಗಿ ಭಿಕ್ಷಾಟನೆ ಮಾಡುತ್ತಿದ್ದಾರೆ. 4 ವರ್ಷಗಳಿಂದ ಅವರು ಹೀಗೆ ಜನಸೇವೆ ಮಾಡುತ್ತಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಂಗಳಮುಖಿ ಜಮುನಾ ಜೋಗತಿ ಪ್ರತಿ ವರ್ಷ ಎರಡು ಜೋಡಿಗೆ ವಿವಾಹ ಮಾಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ತಾಳಿ, ವಸ್ತ್ರ, ಬೋಜನ ವ್ಯವಸ್ಥೆ

ತಾಳಿ, ಸಮವಸ್ತ್ರ, ಉಡುಗೆ ತೊಡುಗೆಗಳು, ಭೋಜನ ವ್ಯವಸ್ಥೆ, ಸೇರಿ ಒಟ್ಟು ಮದುವೆಯ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ. ಜಮುನಾ ಅವರ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇನ್ನೂ ಈ ಹಿಂದೆ ಬೆನ್ನೂರು ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರೂ ವಿಶ್ವಾಸವನ್ನು ಕುಗ್ಗಿಸಿಕೊಳ್ಳದೆ ಸಮಾಜ ಸೇವೆ ಮುಂದುವರಿಸಿದ್ದಾರೆ.

75% ಹಣ ಸಮಾಜ ಸೇವೆಗೆ ಮೀಸಲು

ಇನ್ನು ಬಡ ಮಕ್ಕಳಿಗೆ ಶಾಲಾ ಪರಿಕರಗಳನ್ನು ಮಕ್ಕಳಿಗೆ ಸಿಹಿ ಬೋಜನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಇನ್ನೂ ಭಿಕ್ಷಾಟನೆ ಮಾಡಿ ಬಂದ ಹಣದಲ್ಲಿ 25 ಪರ್ಸೆಂಟ್ ಹಣವನ್ನು ನಮ್ಮ ಜೀವನೋಪಾಯಕ್ಕೆ ಇರಿಸಿಕೊಂಡು 75% ಹಣವನ್ನು ಬಡ ಜನರಿಗೆ ವಿವಾಹ ಮಾಡಿಸುವುದರ ಜೊತೆಗೆ ಬಡ ಮಕ್ಕಳ ವಿದ್ಯಾಭ್ಯಾಸ ಮತ್ತು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರಂತೆ.

ಒಟ್ಟಾರೆ, ಜಮುನಾ‌ರ ಈ ಸಮಾಜ ಸೇವೆ ಸಮಾಜದಲ್ಲಿ ಮಂಗಳಮುಖಿಯರನ್ನು ನೋಡುವ ದೃಷ್ಟಿ ಕೋನ ಬದಲಾಗಿದೆ ಅಂದರೆ ತಪ್ಪಾಗಲಾರದು.

RELATED ARTICLES

Related Articles

TRENDING ARTICLES