Sunday, December 22, 2024

ಕ್ಯಾಂಡಲ್‌ ಹಿಡಿದು ಬೈಕಿಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿ ಬೆಂಕಿಗೆ ಬಲಿ

ತುಮಕೂರು: ಮೊಂಬತ್ತಿ ಬೆಳಕಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕುವಾಗ ಬೆಂಕಿ ಹೊತ್ತಿಕೊಂಡು ಬಾಲಕಿ ಸಾವನ್ನಪ್ಪಿರುವ ಘಟನೆ ನಗರದ ಕುಣಿಗಲ್ ತಾಲೂಕಿನ ಕಟ್ಟಿಗೇನಹಳ್ಳಿಯಲ್ಲಿ ನಡೆದಿದೆ.

ಬೈಕ್ ಗೆ ಪ್ಲಾಸ್ಟಿಕ್ ಬಾಟಲಿನಲ್ಲಿ ಪೆಟ್ರೋಲ್ ಹಾಕುವ ವೇಳೆ ಈ ಘಟನೆ ಸಂಭವಿಸಿದ್ದು, ಸೌಂದರ್ಯ(16) ಮೃತ ಬಾಲಕಿಯಾಗಿದ್ದಾಳೆ.

ಘಟನೆ ನಡೆದಿದ್ದು ಹೇಗೆ..?

ಬೈಕ್‌ಗೆ ಪೆಟ್ರೋಲ್ ಹಾಕುವ ವೇಳೆ ಮೊಂಬತ್ತಿ ಹಿಡಿದಿದ್ದಳು. ಆ ಮೊಂಬತ್ತಿಗೆ ಪೆಟ್ರೋಲ್ ಬಾಟಲಿ ತಗುಲಿ ಹೊತ್ತಿಕೊಂಡ ಬೆಂಕಿ ಬಾಲಕಿ ಮೈಗೂ ಹೊತ್ತಿಕೊಂಡು ಉರಿದ ಪರಿಣಾಮ ಸೌಂದರ್ಯ ಸುಟ್ಟಗಾಯಗಳಿಂದ ನರಳಾಡಿದ್ದಾಳೆ.

ಸುಟ್ಟ ಗಾಯದಿಂದ ಅಸ್ವಸ್ಥಳಾದ ಬಾಲಕಿಗೆ ವಿಕ್ರೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ಧಾಳೆ. ಅಮೃತ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

 

RELATED ARTICLES

Related Articles

TRENDING ARTICLES