Wednesday, January 22, 2025

ಕುಮಾರಸ್ವಾಮಿಗೆ ಅಧಿಕಾರ ಇಲ್ಲದೆ ಇರೋಕೆ ಆಗ್ತಿಲ್ಲ : ದಿನೇಶ್ ಗುಂಡೂರಾವ್

ಬೆಳಗಾವಿ : ರಾಜ್ಯ ಕಾಂಗ್ರೆಸ್​ ಸರ್ಕಾರ ಪತನ ಆಗುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಅಧಿಕಾರ ಇಲ್ಲದೆ ಇರೋಕೆ ಆಗ್ತಾ ಇಲ್ಲ ಎಂದು ಕುಟುಕಿದ್ದಾರೆ.

ಕುಮಾರಸ್ವಾಮಿ ಅವರಿಗೆ ಅಧಿಕಾರ ಬೇಕು, ಅಧಿಕಾರದ ಆಸೆ. ಅವರಿಗೆ ಗೆಲ್ಲೋಕೆ ಆಗೊಲ್ಲ. ನಮಗೆ ಜನ‌ ಆಶೀರ್ವಾದ ಇದೆ. ಜನರ ವಿಶ್ವಾಸದಿಂದ ನಮ್ಮ ಸರ್ಕಾರ ಬಂದಿದೆ. ಈ ಹಿಂದೆ ಮೈತ್ರಿಯಲ್ಲಿದ್ದಾಗ ಏನಾಯ್ತು ಅಂತ ಅವರಿಗೆ ಗೊತ್ತಿದೆ. ವಿಪಕ್ಷದಲ್ಲಿ ಇದ್ದುಕೊಂಡು ಹೇಗೆ ಕೆಲಸ ಮಾಡ್ಬೇಕು ಅಂತ ಅವರಿಗೆ ಗೊತ್ತಿದೆ ಎಂದು ಚಾಟಿ ಬೀಸಿದ್ದಾರೆ.

ನಮ್ಮ ಸರ್ಕಾರ ಬೀಳಿಸ್ತೀನಿ ಅಂತ ಹೇಳ್ತಾರೆ

ನಮ್ಮ ಸರ್ಕಾರ ಬೀಳಿಸ್ತೀನಿ ಅಂತ ಹೇಳ್ತಾರೆ. ವಿಪಕ್ಷದಲ್ಲಿ ಇದ್ದುಕೊಂಡು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ನಮ್ಮ‌ ಎಲ್ಲ ಗ್ಯಾರಂಟಿ ಯೋಜನೆಗಳನ್ನ ನಾವು ಅನುಷ್ಠಾನ ಮಾಡಿದ್ದೀವಿ. ಇನ್ನೂ ಐದು ವರ್ಷ ನಮ್ಮ ಸರ್ಕಾರ ಜನರ ಸೇವೆ ಮಾಡಲಿದೆ. ಇವರಿಗೆ ಜನರ ಬೆಂಬಲ ಇಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿಗೆ ದಿನೇಶ್ ಗುಂಡೂರಾವ್ ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಶಕ್ತಿ ಕಡಿಮೆ ಆಗಿರಬಹುದು

ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ರಾಜಕಾರಣ. ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಕುಮಾರಸ್ವಾಮಿ ಶಕ್ತಿ ಕಡಿಮೆ ಆಗಿರಬಹುದು. ಅದಕ್ಕೆ ಶಕ್ತಿ ಹೆಚ್ಚಿಸಿಕೊಳ್ಳಲು ಮಾತನಾಡುತ್ತಿರಬಹುದು ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES