Monday, January 6, 2025

‘ಕಾಟೇರ’ ಚಿತ್ರದ 2ನೇ ಹಾಡು ‘ಯಾವ ಜನುಮದ ಗೆಳತಿ..’ ಬಿಡುಗಡೆ

ಬೆಂಗಳೂರು : ಡಿ ಬಾಸ್ ದರ್ಶನ್ ‘ಕಾಟೇರ’ನಾಗಿ ತೆರೆಮೇಲೆ ಅಬ್ಬರಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ಸದ್ಯ ಚಿತ್ರತಂಡ ಒಂದೊಂದೇ ಹಾಡು ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡ್ತಿದೆ. ‘ಪಸಂದಾಗವನ್ನೆ’ ಸಾಂಗ್ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಇದೀಗ ಮತ್ತೊಂದು ಮೆಲೋಡಿ ಸಾಂಗ್ ರಿಲೀಸ್ ಆಗಿದೆ.

‘ಕಾಟೇರ’ ಚಿತ್ರದ ಹಾಡುಗಳನ್ನ ಚಿತ್ರತಂಡ ಪ್ಲಾನ್ ಮಾಡಿ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ಪಸಂದಾಗವ್ನೆ’ ಹಾಡಿನಲ್ಲಿ ಆರಾಧನಾ ಅವರು ದರ್ಶನ್ ಗುಣವನ್ನ ವರ್ಣಿಸಿದ್ದರು. ಕಾಟೇರನ ಬತ್ತಳಿಕೆಯಿಂದ ಯಾವ ಹಾಡು ಬರುತ್ತೆ ಅಂತ ನಿರೀಕ್ಷೆಯಲ್ಲಿದ್ದ ದಾಸನ ಫ್ಯಾನ್ಸ್​ಗೆ ಚಿತ್ರತಂಡ ಮತ್ತೊಂದು ಹಾಡು ರಿಲೀಸ್ ಮಾಡಿ ಸರ್ಪ್ರೈಸ್ ನೀಡಿದೆ. ಈ ಹಾಡು ಸಹ ಅಭಿಮಾನಿಗಳ ಮನ ಗೆದ್ದಿದೆ.

ಕಾಟೇರ ಚಿತ್ರದ ‘ಯಾವ ಜನುಮದ ಗೆಳತಿ’ ಹಾಡು ಸ್ಪೆಷಲ್ ಆಗಿದೆ. ಆರಾಧನಾ ಮತ್ತು ದರ್ಶನ್ ಈ ಹಾಡಿನಲ್ಲಿ ಸಖತ್ ಆಗಿಯೇ ಕಾಣಿಸಿದ್ದಾರೆ. ನಾಯಕಿಯ ಬಗ್ಗೆ ನಾಯಕ ವರ್ಣನೆ ಮಾಡಿರುವುದು ಹಾಡಿನ ಹೈಲೆಟ್. ಡಾ. ನಾಗೇಂದ್ರ ಪ್ರಸಾದ್ ಅವರ ಸಾಲುಗಳು, ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಹಾಗೂ ಭೂಷಣ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಈ ಹಾಡು ಎಲ್ಲರಿಗೂ ಇಷ್ಟ ಆಗುವ ರೀತಿಯಲ್ಲಿಯೇ ಮೂಡಿಬಂದಿದೆ.

ಗುಜರಾತ್​ನ ಕಚ್ ಹಾಗೂ ಭುಜ್ ಸೇರಿದಂತೆ ಸುಂದರ ತಾಣಗಳಲ್ಲಿ ಈ ಹಾಡನ್ನು ಚಿತ್ರಿಕರಿಸಲಾಗಿದೆ. ವೈಟ್ ಸ್ಯಾಂಡ್, ವಾಟರ್, ರಾಕ್ಸ್, ಗ್ರೀನರಿ ಹೀಗೆ ವೆರೈಟಿ ಫ್ಲೇವರ್​​ಗಳನ್ನ ಕಾಣಬಹುದಾಗಿದೆ. ಅದರಲ್ಲೂ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯಕ್ಕಾಗಿ ಚಿಕ್ಕಮಗಳೂರಿನಲ್ಲೂ ಈ ಹಾಡನ್ನು ಚಿತ್ರಿಸುವ ಮೂಲಕ ನಿರ್ದೇಶಕ ತರುಣ್ ಸುಧೀರ್ ಹಾಡಿಗೆ ಮತ್ತಷ್ಟು ರಂಗು ತುಂಬಿದ್ದಾರೆ.

ಬಾಕ್ಸ್​ ಆಫೀಸ್​ ಲೂಟಿಗೆ ‘ಕಾಟೇರ’ ರೆಡಿ

ಇದೇ ಡಿಸೆಂಬರ್ 29ರಂದು ಕಾಟೇರ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಈಗಾಗಲೇ ಡಿ ಬಾಸ್ ಫ್ಯಾನ್ಸ್ ಕಾಟೇರನಿಗೆ ಅದ್ದೂರಿ ಸ್ವಾಗತ ಕೋರಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಈ ಸಿನಿಮಾದಿಂದ ಮತ್ತೊಮ್ಮೆ ತನ್ನ ನಂಬಿದವರ ಕಾಯುವ ಒಡೆಯನಾಗಿ ಮಿಂಚು ಹರಿಸಲಿದ್ದಾರೆ. ವರ್ಷದ ಕೊನೆಯ ಬಹುನಿರೀಕ್ಷಿತ ಚಿತ್ರವಾಗಿದ್ದು, ಬಾಕ್ಸ್ ಆಫೀಸ್​​ನಲ್ಲಿ ಈ ಬಾಕ್ಸ್ ಆಫೀಸ್ ಸುಲ್ತಾನ ಎಷ್ಟು ಕೋಟಿ ಲೂಟಿ ಮಾಡ್ತಾನೆ ಅಂತ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES