ಹಾಸನ : ಆರ್ಟಿಕಲ್ 370 ರದ್ದುಗೊಳಿಸಿ ರಾಜ್ಯ ಸ್ಥಾನಮಾನಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿರುವ ವಿಚಾರ ಸಂಬಂಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ಆರ್ಟಿಕಲ್ 370 ಯಾವಾಗ ಕಾಶ್ಮೀರಕ್ಕೆ ಕೊಟ್ಟಿದ್ದಂತಹ ವಿಶೇಷ ಸವಲತ್ತು ಇದೆಯೋ, ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಿದ್ದುಪಡಿ ತರುವುದರ ಮುಖೇನ ಆ ಒಂದು ಸವಲತ್ತನ್ನು ರದ್ದು ಮಾಡಿದೆ. ಅದರಿಂದ ಬೇರೆ ರಾಜ್ಯಗಳಿಗೆ ಏನೂ ಅನುಕೂಲ ಆಗುತ್ತದೆಯೋ, ಅನ್ವಯ ಆಗುತ್ತದೆಯೋ ಅದೇ ಕಾಶ್ಮೀರಕ್ಕೂ ಜಮ್ಮುಗೂ ಅನ್ವಯವಾಗುತ್ತೆ ಎಂದು ತಿಳಿಸಿದ್ದಾರೆ.
ಜಮ್ಮು ಕಾರ್ಶಿರದಲ್ಲಿ ಶಾಂತಿ, ನೆಮ್ಮದಿ
ಆರ್ಟಿಕಲ್ 370 ಇಸ್ ಅಪ್ಲಿಕೇಬಲ್ ಟು ಕಾಶ್ಮೀರ್ ಅಂಡ್ ಜಮ್ಮು. ಐದು ಜನ ನ್ಯಾಯಾಧೀಶರು ಸುಪ್ರೀಂ ಕೋರ್ಟ್ನಲ್ಲಿ ಕುಳಿತು ತೀರ್ಪು ಕೊಟ್ಟಿದ್ದಾರೆ. ಜಮ್ಮು ಕಾರ್ಶಿರದಲ್ಲಿ ಶಾಂತಿ, ನೆಮ್ಮದಿ ಸ್ಥಾಪನೆಗೆ ನಾಂದಿ ಹಾಡಿರುವ ನಿರ್ಣಯಕ್ಕೆ ಸುಪ್ರೀಂ ಕೋರ್ಟ್ ಸಹಮತ ನೀಡಿದೆ. ಇದನ್ನು ನಾನು ವೆಲ್ ಕಂ ಮಾಡುತ್ತೇನೆ ಎಂದು ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.