Wednesday, January 22, 2025

ನಡೆದುಕೊಂಡು ಬರುತ್ತಿದ್ದ ಮಹಿಳೆ ಉಸಿರು ಕಸಿದ ಕಿಲ್ಲರ್ KSRTC

ಮಂಡ್ಯ : KSRTC ಬಸ್‌ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೂಜಾ ಭಾರತಿ (40) ಎಂಬವರೇ ಪ್ರಾಣ ಕಳೆದುಕೊಂಡ ಮಹಿಳೆ. ಅವರು ಮಂಡ್ಯದ ಸಂಬಂಧಿಕರ ಮನೆಗೆ ಬಂದಿದ್ದು, ಅಲ್ಲಿಂದ ಮರಳಿ ಬೆಂಗಳೂರಿಗೆ ತೆರಳಲು ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಕಿಲ್ಲರ್ ಬಸ್‌ ಅವರ ಉಸಿರು ಕಸಿದಿದೆ.

ಮಹಿಳೆಯೊಬ್ಬರು KSRTC ಬಸ್ ನಿಲ್ದಾಣದ ಒಳಗಡೆ ನಡೆದುಕೊಂಡು ಬರುತ್ತಿದ್ದ ವೇಳೆ ಏಕಾಏಕಿ ಬಂದ KA-11-F-0176 ನಂಬರಿನ ಕೆಎಸ್ಸಾರ್ಟಿಸಿ ಬಸ್ ಮಹಿಳೆ ಮೈಮೇಲೆ ಹರಿದಿದೆ. ವಿ.ಸಿ. ಫಾರಂನಿಂದ ಮಂಡ್ಯಕ್ಕೆ ಬಸ್‌ ಬರುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಡ್ರೈವರ್ ಪೊಲೀಸರ ವಶಕ್ಕೆ

ಅಪಘಾತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ಧಾರೆ. ಈ ಸಂಬಂಧ KSRTC ಬಸ್ ಡ್ರೈವರ್ ಚಂದುಕುಮಾರ್‌ನನ್ನು ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES