Sunday, December 22, 2024

ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡಿ.. ಆದ್ರೆ, ಹಿಂದೂಗಳಿಗೆ ಏನು ಕೊಡ್ತೀರಾ? : ಹೆಚ್.ಡಿ. ಕುಮಾರಸ್ವಾಮಿ

ಹಾಸನ : ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಕೊಡ್ತೀವಿ ಅಂತೀರಾ. ನಾನು ಕೊಡಬೇಡಿ ಅನ್ನೊಲ್ಲ. ಆದ್ರೆ, ಹಿಂದುಳಿದ ಹಿಂದೂಗಳಿಗೆ ಏನು ಕೊಡ್ತೀರಾ? ಇದರಲ್ಲೂ ಲೂಟಿ ಹೊಡಿಯೋದಕ್ಕೆ ಪ್ಲಾನ್ ಇದೆಯಲ್ಲ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಗುಡುಗಿದರು.

ಹಾಸನದಲ್ಲಿ ಮಾತನಾಡಿದ ಅವರು, ಜಾತಿ-ಜಾತಿಗಳ ನಡುವೆ ಹೊಡೆದಾಡಿಸುವ ಕೆಲಸ ಯಾಕೆ? ಈ ರಾಜ್ಯ ಉದ್ಧಾರ ಆಗಬೇಕಾದ್ರೆ ಜಾತಿಗಣತಿ ಬೇಕಿಲ್ಲ, ಆರ್ಥಿಕ ಸಮೀಕ್ಷೆ ಆಗುವಂತೆ ಮಾಡುವ ಕೆಲಸ ಆಗಲಿ ಎಂದು ಕಿಡಿಕಾರಿದರು.

ಕಮಿಷನ್ ಹೇಗೆ ಹೊಡೆಯುತ್ತಾರೆ ಅಂತ ನನಗೆ ಗೊತ್ತಿದೆ. ಹೀಗೆ ಹಣ ಹಂಚೋದಾದ್ರೆ ರೈತರಿಗೆ ಏನು ಕೊಡ್ತೀರಿ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರಲ್ಲ, ಇವರ ಸರ್ಕಾರದಲ್ಲೂ ಕಮಿಷನ್ ನಡೆಯುತ್ತಿದೆ ಅಂತ. ಇವರು ಅಧಿಕಾರಕ್ಕೆ ಬಂದು ಮಾಡಿದ್ದೇನು? ಬಿಜೆಪಿ ಮೇಲೆ ಕಮಿಷನ್ ಆರೋಪದಿಂದ ಅಧಿಕಾರಕ್ಕೆ ಬಂದು ಇವರೇನು ಮಾಡಿದ್ರು? ಎಂದು ಆಕ್ರೋಶ ಹೊರಹಾಕಿದರು.

50 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ

ಕೊಬ್ಬರಿಗೆ ಬೆಂಬಲ ಬೆಲೆ ಸಿಗಬೇಕು. ತುಮಕೂರು, ಹಾಸನದಲ್ಲಿ ಬೆಳೆಯುವ ಕೊಬ್ಬರಿ ಬೆಲೆ 50% ಗಿಂತ ಕಡಿಮೆಯಾಗಿದೆ. ತೆಂಗು ಬೆಳೆಗಾರರ ಕಷ್ಟ ನಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂಬ ಬೇಡಿಕೆ ಸದನದಲ್ಲೂ ಕೇಳಿಬಂದಿದೆ. ಕಳೆದ ವರ್ಷವೂ ನಫೆಡ್ ಮೂಲಕ ಕೇಂದ್ರ ಸರ್ಕಾರ 6 ತಿಂಗಳು ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡಿದೆ. ಸುಮಾರು 50 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ವಿಂಟಲ್​​​​​​ಗೆ 15 ಸಾವಿರ ಹಣ ಕೊಡುತ್ತೇವೆ ಎಂದಿದ್ರು. ಆದರೆ, ಹಿಂದೆ ಖರೀದಿ ಆಗಿದ್ದ ಕೊಬ್ಬರಿಗೆ ಸಹಾಯಧನವನ್ನೂ ರಾಜ್ಯ ಸರ್ಕಾರ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES