Monday, December 23, 2024

ಗುಟ್ಕಾ ಜಾಹೀರಾತು ಪ್ರಕರಣ : ಶಾರುಖ್, ಅಕ್ಷಯ್ ಮತ್ತು ಅಜಯ್ ದೇವಗನ್​ಗೆ ನೋಟಿಸ್

ಬೆಂಗಳೂರು : ಗುಟ್ಕಾ ಕಂಪನಿಗಳಿಗೆ ಜಾಹೀರಾತು ನೀಡಿರುವ ಸಂಬಂಧ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಅಲಹಾಬಾದ್ ಉಚ್ಛ ನ್ಯಾಯಾಲಯದ ಲಖನೌ ಪೀಠಕ್ಕೆ ತಿಳಿಸಿದೆ.

ಸುಪ್ರೀಂ ಕೋರ್ಟ್‌ನಲ್ಲೂ ಇದೇ ವಿಷಯದ ವಿಚಾರಣೆ ನಡೆಯುತ್ತಿದ್ದು, ತ್ವರಿತವಾಗಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೇಂದ್ರದ ವಕೀಲರು ಶುಕ್ರವಾರ ಹೈಕೋರ್ಟ್‌ಗೆ ತಿಳಿಸಿದರು. ವಾದವನ್ನು ಆಲಿಸಿದ ನಂತರ, ಪೀಠವು ವಿಚಾರಣೆಯನ್ನು 2024ರ ಮೇ 9ಕ್ಕೆ ನಿಗದಿಪಡಿಸಿತು.

ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರಿದ್ದ ಪೀಠವು, ಈ ನಟರು ಉನ್ನತ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ, ಗುಟ್ಕಾ ಕಂಪನಿಗಳಿಗೆ ಜಾಹೀರಾತುಗಳನ್ನು ಮಾಡುವಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ, ನಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಅರ್ಜಿದಾರರ ಪ್ರಾತಿನಿಧ್ಯವನ್ನು ನಿರ್ಧರಿಸಲು ಸೆಪ್ಟೆಂಬರ್ 2022ರಲ್ಲಿ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಅಕ್ಟೋಬರ್ 22ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ವಾದಿಸಿದರು.

RELATED ARTICLES

Related Articles

TRENDING ARTICLES