Monday, December 23, 2024

ಶಾಸಕರ ವಿರುದ್ಧ ಪೋಸ್ಟ್​ : ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಕಾಂಚನ್ ಹೋಟೆಲ್​ನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.

ಊಟ ಕಟ್ಟಿಸಿಕೊಳ್ಳಲು ಬಂದಿದ್ದ ಬಿಜೆಪಿ ಕಾರ್ಯಕರ್ತ (ಮುಖಂಡ) ಗೋಕುಲ್ ಕೃಷ್ಣನ್ ಮೇಲೆ ಆರೇಳು ಮಂದಿಯ ಗುಂಪು ದೊಣ್ಣೆಯಿಂದ ಹಲ್ಲೆ ಮಾಡಿ ಪರಾರಿಯಾಗಿದೆ.

ಗೋಕುಲ್ ಕೃಷ್ಣನ್ ಹಣೆ ಮತ್ತು ಕಿವಿಗೆ ಬಲವಾದ ಪೆಟ್ಟು ಬಿದ್ದಿದೆ. ರಕ್ತಸ್ರಾವದಿಂದ ಬಳಲುತ್ತಿದ್ದ ಗಾಯಾಳುವನ್ನು ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಕುಲ್ ಭದ್ರಾವತಿಯ ಸಿದ್ದಾಪುರದ ವಿಶ್ವೇಶ್ವರಯ್ಯ ಲೇಔಟ್ ನಿವಾಸಿಯಾಗಿದ್ದಾರೆ.

ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಭದ್ರಾವತಿಯಲ್ಲಿ ಇಸ್ಟೀಟ್ ಹಾವಳಿ ಹೆಚ್ಚಾಗಿದೆ ಎಂದು ಪೋಸ್ಟ್ ಗೋಕುಲ್ ಪೋಸ್ಟ್ ಮಾಡಿದ್ದರು. ಪೋಸ್ಟ್ ಮಾಡಿರುವುದನ್ನು ಖಂಡಿಸಿ, ಬೆಳಗ್ಗೆ ಗೋಕುಲ್ ಕಾರಿನ ಮೇಲೆ ಹಲ್ಲೆ ನಡೆಸಲಾಗಿತ್ತು. ದುಷ್ಕರ್ಮಿಗಳು ಗೋಕುಲ್ ಕಾರಿನ ಗಾಜು ಹೊಡೆದಿದ್ದರು. ರಾತ್ರಿ ಗೋಕುಲ್ ಮೇಲೆ ಹಲ್ಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

ಪೋಸ್ಟ್​ನಲ್ಲಿ ಏನಿತ್ತು?

ಗೆಲ್ಲುವ ಮುಂಚೆ ಯುವಕರಿಗೆ ಉದ್ಯೋಗ ಕೊಡಿಸುತ್ತೇನೆ. ಎಂಪಿಎಂ ಪ್ರಾರಂಭಿಸುತ್ತೇನೆ ಎಂದ ಶಾಸಕರೇ, ಯಾಕೆ ಜೂಜಾಟ (ಇಸ್ಪೀಟ್) ತಡೆಗಟ್ಟುತ್ತಿಲ್ಲ ಎಂದು ಗೋಕುಲ್ ಪೋಸ್ಟ್ ಮಾಡಿದ್ದರು. ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ಪ್ರಶ್ನಿಸಿ ಈ ಪೋಸ್ಟ್ ಮಾಡಿದ್ದರು.

RELATED ARTICLES

Related Articles

TRENDING ARTICLES