Thursday, December 19, 2024

ಕಾಟೇರಾ ಹಾಡಿಗೆ ಕನಸಿನರಾಣಿ ಮಾಲಾಶ್ರೀ ಭರ್ಜರಿ ಸ್ಟೆಪ್ಸ್

ಬೆಂಗಳೂರು : ಮುಂಬೈನಿಂದ ವಾಪಸಾಗುತ್ತಿದ್ದಂತೆಯೇ, ಮಾಲಾಶ್ರೀ ಅವರು ಪಸಂದಾಗವ್ನೆ ಸ್ಯಾನೆ ಪಸಂದಾಗವ್ನೆ ಹಾಡಿಗೆ ನಿಂತಲ್ಲಿಯೇ ಒಂದೆರಡು ಸ್ಟೆಪ್​ ಹಾಕಿದ್ದಾರೆ. ಇದರ ರೀಲ್ಸ್​ ವೈರಲ್​ ಆಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾದ ಈ ರೀಲ್ಸ್​ ಅನ್ನು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ನೀವು ಸಕತ್​ ಪಸಂದ್ ಆಗಿ ಕಾಣಿಸುತ್ತಿದ್ದೀರಿ ಎನ್ನುತ್ತಿದ್ದಾರೆ. ಈ ಹಾಡಿಗೆ ಆರಾಧನಾ ಅವರು ಮಾಡಿದ ಡ್ಯಾನ್ಸ್​ ವಿಡಿಯೋ ರಿಲೀಸ್​ ಆದಾಗಲೂ ಫ್ಯಾನ್ಸ್​ ಥರಹೇವಾರಿ ಕಮೆಂಟ್​ ಮಾಡಿದ್ದರು. ತಾಯಿಯನ್ನು ಮೀರಿಸುವ ಟ್ಯಾಲೆಂಟ್‌, ಆರಾಧನಾಗೆ ಶುಭವಾಗಲಿ ಎಂದು ಹಲವರು ಶುಭ ಕೋರಿದ್ದರು.

ಹಾಡು ಪೂರ್ತಿ ಆರಾಧನಾ ತುಂಬಾ ಚೆನ್ನಾಗಿ ಕಾಣ್ತಾರೆ. ಡ್ಯಾನ್ಸ್‌ ಮೂವ್ಸ್‌, ಎಕ್ಸ್‌ಪ್ರೆಷನ್ಸ್‌ ಎಲ್ಲಾ ಮಾಲಾಶ್ರೀ ಮೇಡಮ್ ನೆನಪಿಸ್ತಾರೆ. ಒಳ್ಳೆ ಹೀರೋಯಿನ್ ಆಗೋ ಎಲ್ಲಾ ಲಕ್ಷಣ ಇದೆ. ದರ್ಶನ್​ ಅವರಿಗೆ ಒಳ್ಳೆ ಜೋಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಮಾಲಾಶ್ರೀ ಅವರ ಸ್ಟೆಪ್​ಗೂ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಇದೇ ಡಿಸೆಂಬರ್​ ತಿಂಗಳ 29 ರಂದು ಚಿತ್ರ ರಿಲೀಸ್ ಆಗುತ್ತಿದೆ. ಇದಾಗಲೇ ಮಾಲಾಶ್ರೀ ಮತ್ತು ಮಗಳು ಮುಂಬೈಗೆ ತೆರಳಿ ಸಿದ್ಧಿವಿನಾಯಕ ದೇವಾಲಯಕ್ಕೆ ಹೋಗಿ ಚಿತ್ರಕ್ಕೆ ದೊಡ್ಡಮಟ್ಟದ ಸಕ್ಸಸ್ ಸಿಗಲಿ ಎಂದು ಪೂಜೆ ಸಲ್ಲಿಸಿದ್ದಾರೆ.

 

View this post on Instagram

 

A post shared by Malashree Ramanna (@malashreeramu)

RELATED ARTICLES

Related Articles

TRENDING ARTICLES