Thursday, January 23, 2025

ಶ್ವಾನಕ್ಕೆ ರಕ್ತದಾನ ಮಾಡಿದ ‘ಸಿರಿ’ ಶ್ವಾನ : ಇದೇ ನೋಡಿ ದೇಶದಲ್ಲಿ ರಕ್ತದಾನ ಮಾಡಿದ ಮೊದಲ ಶ್ವಾನ

ಹಾವೇರಿ : ಕಾಯಿಲೆಯಿಂದ ಬಳಲುತ್ತಿದ್ದ ಶ್ವಾನವೊಂದಕ್ಕೆ ಮತ್ತೊಂದು ಶ್ವಾನ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ. ಈ ಮೂಲಕ ದೇಶದಲ್ಲಿ ರಕ್ತದಾನ ಮಾಡಿದ ಶ್ವಾನ ಎಂಬ ಖ್ಯಾತಿ ಪಡೆದಿದೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ಶ್ವಾನ, ಶ್ವಾನಕ್ಕೆ ರಕ್ತದಾನ ಮಾಡಿದೆ. ಹುಲ್ಲತ್ತಿ ಗ್ರಾಮದ ನಿವಾಸಿ ನಾಗರಾಜ್ ಗೊಲ್ಲರ ಎಂಬುವರ ಶ್ವಾನವೊಂದು ರೋಗದಿಂದ ಬಳಲುತ್ತಿತ್ತು. ಈ ಶ್ವಾನಕ್ಕೆ ರಕ್ತದಾನ ಮಾಡಿ ಸಿರಿ ಎಂಬ ಸಾಕು ನಾಯಿ ಎಲ್ಲರಿಂದ ಭೇಷ್ ಎನಿಸಿಕೊಂಡಿದೆ.

ಬಮ್ಮನಹಳ್ಳಿ ಗ್ರಾಮದ ರಂಜಿತ್ ಎಂಬುವರಿಗೆ ಸೇರಿದ ಸಿರಿ ಎಂಬ ಹೆಸರಿನ ಶ್ವಾನ ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನಕ್ಕೆ ರಕ್ತದಾನ ಮಾಡಿದೆ. ಈ ಚಿಕಿತ್ಸೆಗೆ ಅಕ್ಕಿಆಲೂರನ ಹಿರಿಯ ಪಶುವೈದ್ಯಾಧಿಕಾರಿ ಡಾ. ಅಮಿತ್ ಪುಠಾಣಿಕರ್ ಮತ್ತು ಪಶುವೈದ್ಯ ಡಾ.ಸಂತೋಷ್ ಮಲಗುಂದ ಹಾಗೂ ತಂಡದವರು ಕೈ ಜೋಡಿಸಿದರು. ಇನ್ನು ರಕ್ತದಾನಕ್ಕೆ ಹೆಸರಾಗಿರುವ ಅಕ್ಕಿಆಲೂರು ಪಶು ಆಸ್ಪತ್ರೆ ಮತ್ತೊಂದು ವಿಶೇಷ ಮಾನವೀಯತೆ ಕೆಲಸಕ್ಕೆ ಈಗ ಸಾಕ್ಷಿಯಾಗಿದೆ.

RELATED ARTICLES

Related Articles

TRENDING ARTICLES