ಚಿಕ್ಕಮಗಳೂರು: ಟ್ರಕ್ಕಿಂಗ್ಗೆ ಬಂದಿದ್ದ ಯುವಕ ಕಾಣೆಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿ ನಡೆದಿದೆ.
ಭರತ್ ಕಾಣೆಯಾಗಿರುವ ಯುವಕ, ಬಿ,ಇ ಮುಗಿಸಿರುವ ಭರತ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಬೆಂಗಳೂರನಿಂದ ತನ್ನ ಹಾರ್ನೆಟ್ ಬೈಕ್ ನಲ್ಲಿ ಚಾರಣಕ್ಕೆಂದು ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿರುವ ರಾಣಿ ಝರಿ ಪಾಯಿಂಟ್ಗೆ ಬಂದಿದ್ದ ವೇಳೆ ಕಾಣೆಯಾಗಿದ್ದಾನೆ.
ಇದನ್ನೂ ಓದಿ: ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ
ಮಗ ಮಿಸ್ಸಿಂಗ್ ಆಗಿರುವ ವಿಚಾರ ತಿಳಿದು ಭರತ್ ಪೋಷಕರು ಹುಡುಕಿಕೊಂಡು ಬಂದಿದ್ದಾರೆ. ಕಾಣೆಯಾಗಿರುವ ಭರತ್ಗಾಗಿ ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹುಡುಕಾಟ ನಡೆದಿದ್ದು ಈ ವೇಳೆ ರಾಣಿಝರಿ ಪಾಯಿಂಟ್ ನಲ್ಲಿ ಬೈಕ್ ಸಿಕ್ಕಿದ್ದು ಗುಡ್ಡದ ತುದಿಯಲ್ಲಿ ಟೀ ಶರ್ಟ್, ಮೊಬೈಲ್, ಚಪ್ಪಲಿ ಪತ್ತೆಯಾಗಿದೆ.