Wednesday, January 22, 2025

ನನ್ನಮ್ಮ ಪ್ರೀತಿಗೆ ಕೊರತೆ ಮಾಡಲಿಲ್ಲ: ವಿನೋದ್​ ರಾಜ್​ ಬಾವುಕ ನುಡಿ!

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ಅವರು ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದರು. ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್ ಅವರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

ಅಮ್ಮ ಇಲ್ಲ ಎಂಬ ನೋವು ಅವರನ್ನು ಬಹುವಾಗಿ ಕಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಮ್ಮ ಕಂಡ ಕನಸನ್ನು ಈಡೇರಿಸುವ ಉದ್ದೇಶವನ್ನು ವಿನೋದ್ ಹೊಂದಿದ್ದಾರೆ. 56 ವರ್ಷಗಳ ಕಾಲ ತಾಯಿ ಜೊತೆ ಕಾಲ ಕಳೆದೆ. ನನ್ನಮ್ಮ ಪ್ರೀತಿಗೆ ಕೊರತೆ ಮಾಡಲಿಲ್ಲ. ಜೀವನ ಪೂರ್ತಿ ನನ್ನ ಕೈಹಿಡಿದುಕೊಂಡೇ ಕಳೆದುಹೋದರು. ನೀರು ಕುಡಿಯುವಾಗಲೇ ಪ್ರಾಣಬಿಟ್ಟರು. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನು 2-3 ತಿಂಗಳಿಂದ ಊಟ ಮಾಡುವುದನ್ನೇ ಬಿಟ್ಟಿದ್ದೆ. ಎಷ್ಟು ಬೇಡಿಕೊಂಡರೂ ತಾಯಿ ಪಡೆದುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ ವಿನೋದ್ ರಾಜ್.

ಇದನ್ನೂ ಓದಿ: ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ

‘ಅಮ್ಮ ಹೇಳಿದ ತಾಳ್ಮೆ, ಸಮಾಧಾನ ಯಾರೂ ಹೇಳಲು ಸಾಧ್ಯವಿಲ್ಲ. ಅವರಿಗೆ ಸಾಕಷ್ಟು ಕನಸುಗಳಿದ್ದವು, ಬಾಕಿಯಿರುವ ಕೆಲಸ ಮಾಡುತ್ತೇನೆ. ಮನೆಯಿಂದ ಹೊರಡುವಾಗ ಐವತ್ತು ನೂರು ಕೊಟ್ಟು ಹೋಗುತ್ತಿದ್ದರು. ನಮಗಿಂತ ಬಡತನದಲ್ಲಿರುವವರ ಬೆನ್ನಿಗೆ ನಿಲ್ಲಬೇಕು ಎಂದು ಅಮ್ಮ ಹೇಳುತ್ತಿದ್ದರು’ ಎಂದು ಅಮ್ಮನ ಮಾತನ್ನು ವಿನೋದ್ ರಾಜ್ ನೆನಪಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES