ಯಾದಗಿರಿ : ಕತ್ತಲಾಗುತ್ತಿದ್ದಂತೆ ಯಾದಗಿರಿ ನಜರತ್ ಕಾಲೋನಿಯ ಉದ್ಯಾನವನ ಪಡ್ಡೆಗಳು, ಕುಡುಕರಿಗೆ ಬಯಲು ಮದ್ಯ ಸೇವನೆಯ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ!
ಮಧ್ಯೆ ಪ್ರೀಯರ ಹಾವಳಿಯಿಂದ ನಜರತ್ ಕಾಲೋನಿಯ ಉದ್ಯಾನವನ ಅಸ್ತವ್ಯಸ್ತ ಗೊಂಡಿರುವಂತಹ ಘಟನೆ ಯಾದಗಿರಿ ನಗರದ ಹೋಸಳ್ಳಿ ಕ್ರಾಸ್ ಬಳಿ ನಡೆದಿದೆ. ರಾತ್ರಿ ವೇಳೆ ಕುಡುಕರ ಅಡ್ಡೆಯಾಗುತ್ತಿದ್ದರೂ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ.
ಉದ್ಯಾನವನ ಗಾರ್ಡನ್ ಬಳಿ ಕುಳಿತು ಮದ್ಯೆ ಸೇವಿಸಿ ಎಲ್ಲೆದ್ದರಲ್ಲಿ ಬಾಟಲಿಗಳು ಬಿಸಾಕಿ ಹೋಗುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಗಾರ್ಡನ್ ಇದ್ರು ಸಾರ್ವಜನಿಕರು ವ್ಯಾಯಾಮ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ವಿಜ್ಞಾನ ಜ್ಯೋತಿ ಮಕ್ಕಳು ಕಾಲೇಜಿಗೆ ಬಂದ್ರೆ ಇದೆ ಗಾರ್ಡನ್ ನಲ್ಲಿ ಊಟ ಮಾಡಲು ಬರುತ್ತಾರೆ, ಆ ಮಕ್ಕಳಿಗೂ ತೊಂದರೆಯಾಗುತ್ತಿದೆ.
ಹಳ್ಳ ಹಿಡಿದ ಬಹುತೇಕ ಗಾರ್ಡನ್ಗಳು
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಜಿಲ್ಲೆಯ ಬಹುತೇಕ ಗಾರ್ಡನ್ ಗಳು ಹಳ್ಳ ಹಿಡಿದಿದ್ದು ನಿರ್ವಹಣೆ ಕೊರೆತೆ ಎದ್ದು ಕಾಣುತ್ತಿದೆ ಎಂದು ನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.