Monday, December 23, 2024

ಡಾ.ರಾಜ್‌ಕುಮಾರ್-ಲೀಲಾವತಿ ಜೋಡಿ ಅತ್ಯಂತ ಜನಪ್ರಿಯ: ದ್ವಾರಕೀಶ್

ಬೆಂಗಳೂರು: ನಟಿ ಲೀಲಾವತಿ ಅವರಿಗೆ ಹಿರಿಯ ನಟ ದ್ವಾರಕೀಶ್ ಅಂತಿಮ ನಮನ ಸಲ್ಲಿಸಿದ್ದಾರೆ.
ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು,ಲೀಲಾವತಿ ಅವರ ಜೊತೆ ನಾನು ಮಗನಾಗಿ ನಟಿಸಿದ್ದೇ ನನ್ನ ಭಾಗ್ಯ ಎಂದು ಸ್ಮರಿಸಿದ್ದಾರೆ.
ವಿನೋದ್‌ರಾಜ್ ಮತ್ತು ಲೀಲಾವತಿ ದೇವರು ಮಾಡಿಸಿದ ತಾಯಿ, ಮಗ ಅವರ ಬಾಂಧವ್ಯ ಇತರರಿಗೆ ಮಾದರಿ.  ನಾಯಕಿ ಪಾತ್ರವಲ್ಲ, ಪೋಷಕ ಪಾತ್ರದಲ್ಲೂ ಲೀಲಾವತಿ ಜೀವ ತುಂಬಿದ್ದಾರೆ. ಡಾ.ರಾಜ್‌ಕುಮಾರ್-ಲೀಲಾವತಿ ಜೋಡಿಯೆಂದರೆ ಅತ್ಯಂತ ಜನಪ್ರಿಯ ಜೋಡಿ. ಆ ಜೋಡಿಯ ಹಾಗೇ ಮತ್ತೆ ಸಿನಿಮಾಗಳು ಬರಲೇ ಇಲ್ಲ. 60ರ ದಶಕದಲ್ಲಿ ಅವರು ನಟಿಸಿದ ಸಿನಿಮಾವೆಲ್ಲವೂ ಯಶಸ್ವಿಯಾಗಿದೆ. ಅವರು ಮಾಡಿದ ಪಾತ್ರವೆಲ್ಲವೂ ಶ್ರೇಷ್ಠ ಪಾತ್ರವಾಗಿದೆ.
ನಾನು ಅವರ ಜೊತೆ ‘ಡ್ಯಾನ್ಸ್ ರಾಜ ಡ್ಯಾನ್ಸ್’, ವಿನೋದ್ ರಾಜ್ ಜೊತೆ ಮಾಡಿದೆ. ‘ಕೃಷ್ಣ ನೀ ಕುಣಿದಾಗ’ ಎಂಬ ಸಿನಿಮಾದಲ್ಲಿ ನಟಿಸಿದ್ದೀನಿ  ಅದು ನನ್ನ ಭಾಗ್ಯ ಎಂದರು. ಇಂತಹ ಸಂದರ್ಭದಲ್ಲಿ ವಿನೋದ್‌ರಾಜ್‌ಗೆ ದೇವರು ಧೈರ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಎಸ್.ನಾರಾಯಣ್, ನಟಿ ಶ್ರುತಿ, ಸುಧಾರಾಣಿ, ಶ್ರೀನಾಥ್, ಪೂಜಾ ಗಾಂಧಿ, ಮಾಳವಿಕಾ ಅವಿನಾಶ್, ಉಪೇಂದ್ರ ಸೇರಿದಂತೆ ಹಲವರು ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇನ್ನೂ ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿ ಅವರ ಅಂತ್ಯ ಸಂಸ್ಕಾರ ಮಧ್ಯಾಹ್ನ 3:30ಕ್ಕೆ ನೆರವೇರಲಿದೆ.

 

RELATED ARTICLES

Related Articles

TRENDING ARTICLES