Sunday, December 22, 2024

ಯಶ್ ಹೊಸ ಚಿತ್ರಕ್ಕೆ ‘Toxic’ ಟೈಟಲ್; ಸಿನ್ಮಾ ಡೇಟ್ ಕೂಡಾ ಫಿಕ್ಸ್

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಟ ಯಶ್​ ಪ್ರೊಫೈಲ್​ ಫೋಟೋ ಲೋಡಿಂಗ್​ ಎಂದು ಪೋಸ್ಟ್  ಹಾಕುವ ಮೂಲಕ 19ನೇ ಸಿನಿಮಾದ ಸುಳಿವು ನೀಡಿ ಅಭಿಮಾನಿಗಳಿಗೆ ಕುತೂಹಲ ಹುಟ್ಟಿಸಿದ್ದರು.

ಅಂದಿನಿಂದ ಫ್ಯಾನ್ಸ್​ ಹೊಸ ಸಿನಿಮಾದ ಬಗ್ಗೆ ಕಾದು ಕುಳಿತ್ತಿದ್ದಾರೆ. ಹಾಗಾಗಿ ಯಶ್​19ನೇ ಸಿನಿಮಾದ ಬಗ್ಗೆ ಎಲ್ಲರಿಗೂ ನಿರೀಕ್ಷೆ ಹೆಚ್ಚಾಗಿದ್ದು ಇದೀಗ ರಾಕಿಭಾಯ್​ ಹೊಚ್ಚ ಹೊಸ ಸಿನಿಮಾದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕೆಜಿಎಫ್​ ಚಾಪ್ಟರ್​ 1 ಮತ್ತು ಕೆಜಿಎಫ್ ಚಾಪ್ಟರ್​ 2 ಶೀರ್ಷಿಕೆಯ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿರುವ  ನಟ ಯಶ್​ ಈಗ ಹೊಸ ಚಿತ್ರಕ್ಕೆ ‘ಟಾಕ್ಸಿಕ್​’ ಹೆಸರು ಇಟ್ಟಿದ್ದಾರೆ. ರಾಕಿ ಭಾಯ್ ಹೊಸ ಸಿನಿಮಾ ಘೋಷಣೆಗೆ ಆಗುತ್ತಿದ್ದಂತೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಹೊಂಬಾಳೆ ಯಶಸ್ಸಿನ ಬಳಿಕ ಹೊಚ್ಚ ಹೊಸ ಸಿನಿಮಾಗಾಗಿ ಕೆವಿಎನ್​ ಅವರ ಜೊತೆಗೆ 19ನೇ ಸಿನಿಮಾದ ಜರ್ನಿ ಶುರು ಮಾಡಿದ್ದಾರೆ.

ಒಂದು ವರ್ಷ 8 ತಿಂಗಳ ಬಳಿಕ ಮತ್ತೆ ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಹೊಸ ಸಿನಿಮಾ ಹೆಸರು ಘೋಷಣೆ ಆಗಿದೆ. ಈ ಸಿನಿಮಾ ಕೆಜಿಎಫ್​ ರೀತಿ ದಾಖಲೆ ಮೀರಿಸುತ್ತಾ? ಮತ್ತೆ ಯಶ್​ಗೆ ಜಯ ತಂದುಕೊಡುತ್ತಾ? ಎಂಬ ನಿರೀಕ್ಷೆಯಂತೂ ಫ್ಯಾನ್ಸ್​ಗೆ ಕಾಡುತ್ತಿದೆ. ಇವೆಲ್ಲದಕ್ಕೆ ಸಿನಿಮಾ ರಿಲಿಸ್​ ಬಳಿಕವಷ್ಟೇ ಉತ್ತರ ಸಿಗಬೇಕಿದೆ.

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಲಾಗಿದೆ. 10-4-2025ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಲಿದೆ.

 

 

 

 

RELATED ARTICLES

Related Articles

TRENDING ARTICLES