Monday, December 23, 2024

ಹುಲಿ ಉಗುರು, ಡ್ರಗ್ಸ್ ಮಾರಾಟ: ಆರು ಆರೋಪಿಗಳ ಬಂಧನ

ದಾವಣಗೆರೆ: ಹುಲಿ ಉಗುರು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರು ಜನ ಅರೋಪಿಗಳನ್ನು ಜಿ.ಮಲ್ಲಿಕಾರ್ಜುನಪ್ಪ ಬಡಾವಣೆಯಲ್ಲಿ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಶೋಕ್ ಕುಮಾರ್ (27), ಲೋಕೇಶ್ (40), ಕಾರ್ತಿಕ್ (32), ನೌರತನ್(34), ರಾಜಸ್ಥಾನ ಮೂಲದ ರಮೇಶ್ ಕುಮಾರ್ (39) ಹಾಗೂ ಸುನೀಲ್ ಕುಮಾರ್ (28) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಆರು ಹುಲಿ ಉಗುರು, 49 ಗ್ರಾಂ. ಎಂಡಿಎಂಎ ಮಾದಕ ವಸ್ತು, ನಾಲ್ಕು ಮೊಬೈಲ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಮಾಜಿ MLA ಮೊಮ್ಮಗನಿಗೆ ಸರಗಳ್ಳತನ ಮಾಡೋ ಶೋಕಿ : ಮೂವರ ಬಂಧನ

ಆರೋಪಿಗಳು ನಗರದಲ್ಲಿ ಮಾದಕ ವಸ್ತು ಹಾಗೂ ಹುಲಿ ಉಗರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಈ ವಸ್ತುಗಳು ಹೇಗೆ ಸಿಕ್ಕವು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಗುಂಪಿನಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES