ಹೈದರಾಬ್: ತೆಲಂಗಾಣದಲ್ಲಿ ಅಧಿಕಾರಕ್ಕೇರಿದ ನೂತನ ಕಾಂಗ್ರೆಸ್ ಸರ್ಕರವು ಆರು ಗ್ಯಾರೆಂಟಿಗಳ ಪೈಕಿ ಎರಡು ಗ್ಯಾರೆಂಟಿಗಳನ್ನು ಡಿ.9 ರಿಂದ ಜಾರಿಗೆ ತರಲು ಸಿದ್ದತೆ ಮಾಡಿಕೊಂಡಿದೆ.
ತೆಲಂಗಾಣದಲ್ಲಿ ಗ್ಯಾರೆಂಟಿಗಳ ಭರವಸೆ ಆಧಾರದ ಮೇಲೆ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರವು ಇದೇ ಡಿ.9 ರಂದು ಆರು ಗ್ಯಾರೆಂಟಿಗಳ ಪೈಕಿ ಎರಡು ಗ್ಯಾರೆಂಟಿಗಳಾದ ಮಹಿಳೆಯರಿಗೆ ಟಿಎಸ್ಆರ್ಟಿಸಿ ಉಚಿತ ಬಸ್ ಸೇವೆ ಮತ್ತು 10 ಲಕ್ಷರೂಗಳ ವರೆಗೆಗಿನ ರಾಜೀವ್ ಗಾಂಧಿ ಆರೋಗ್ಯ ವಿಮೆಯನ್ನು ಜಾರಿ ಮಾಡಲಿದೆ.
ಇದನ್ನು ಓದಿ: ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು!
ಈ ಕುರಿತು ನೂತನ ಸಚಿವ ಶ್ರೀಧರ್ ಬಾಬು ಅವರು ಮಾದ್ಯಮದವರೊಂದಿಗೆ ಮಾತನಾಡಿ 6 ಉಚಿತ ಗ್ಯಾರೆಂಟಿಗಳ ಕುರಿತು ಸಿಎಂ ರೇವಂತ್ ರೆಡ್ಡಿ ಸಂಬಂಧಿಸಿದ ಅಧಿಕಾರಿಳೊಂದಿಗೆ ಚರ್ಚಿಸಿ ಮುಂದಿನ 100 ದಿನಗಳಲ್ಲಿ ಜಾರಿ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದರು.