Wednesday, January 22, 2025

ಇಂಗು ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಬೆಂಗಳೂರು: ನಮ್ಮ ಆರೋಗ್ಯದ ವೃದ್ದಿ ಹೆಚ್ಚಿಸಲು ಇಂಗೂ ಅತ್ಯಂತ ಸಹಾಯಕ.ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಅನೇಕ ಪದಾರ್ಥಗಳಲ್ಲಿ ಇಂಗು ಪ್ರಮುಕ ಪಾತ್ರವಹಿಸುತ್ತದೆ. 

ನಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ರಾಮಬಾಣ. ನೈಸರ್ಗಿಕವಾಗಿ ರುವುದರಿಂದ ಇದರಿಂದ ಸಿಗುವ ಪ್ರಯೋಜನಗಳು ಜಾಸ್ತಿ. ಮೆಟಬೋಲಿಸಂ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಅನುಕೂಲವಾಗಿರುವ ಇಂಗು ಉತ್ತಮ ಜೀರ್ಣ ಶಕ್ತಿಯನ್ನು ನಿಮ್ಮದಾಗುವಂತೆ ಮಾಡಿ ದೇಹಕ್ಕೆ ಪೌಷ್ಟಿಕಾಂಶ ಗಳು ಹೆಚ್ಚಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

ಇಂಗು ಸೇವನೆಯಿಂದ ಸಿಗುವ ಲಾಭಗಳು 

  • ಉರಿಯುತದ ವಿರುದ್ಧ ರಕ್ಷಣೆ ನೀಡಲು ಸಹಾಯಕ
  • ಜೀರ್ಣ ಶಕ್ತಿ ಹೆಚ್ಚಿಸುತ್ತದೆ.
  • ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ರಾಮಬಾಣ.
  • ಜೀರ್ಣಶಕ್ತಿಯನ್ನು ಹೆಚ್ಚಿಸಲು ಇದು ಸಹಾಯಕ

ಇಂಗು ವಾಟರ್ ತಯಾರಿಸುವುದು ಹೇಗೆ?
ಬಹಳ ಸುಲಭವಾಗಿ ನೀವು ಇದನ್ನು ತಯಾರಿಸಿಕೊಳ್ಳಬಹುದು. ಮೊದಲಿಗೆ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿ ಸ್ವಲ್ಪ ಇಂಗು ಇದರಲ್ಲಿ ಸೇರಿಸಿ ಕೆಲವು ನಿಮಿಷಗಳ ಕಾಲ ಇದನ್ನು ಚೆನ್ನಾಗಿ ತಿರುಗಿಸಿ ಕುದಿಸಿ.ಈಗ ಇದನ್ನು ಸೋಸಿಕೊಂಡು ಕುಡಿಯಿರಿ ಇದಕ್ಕೆ ಬೇಕಾದರೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆಹಣ್ಣಿನ ರಸ ಸೇರಿಸಿಕೊಳ್ಳಬಹುದು.​

RELATED ARTICLES

Related Articles

TRENDING ARTICLES